

ಕೋಟ : ಜೆ.ಸಿ.ಐ ಕಲ್ಯಾಣಪುರ, ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ ಇವರ ಆಶ್ರಯದಲ್ಲಿ ಶಿಕ್ಷಕ -ಬರಹಗಾರ ಜೆ.ಸಿ ನರೇಂದ್ರಕುಮಾರ್ ಕೋಟ ಸಾರಥ್ಯದಲ್ಲಿ 25 ಗಂಟೆಗಳ ನಿರಂತರ ಆನ್ಲೈನ್ ವ್ಯಕ್ತಿತ್ವ ವಿಕಸನ ಟ್ರೈನಿಂಗ್ ಮ್ಯಾರಥಾನ್ ಇಂಡಿಯ ಬುಕ್ ಆಫ್ ರೆಕಾರ್ಡ್ ದಾಖಲೆಗಾಗಿ ರಾಷ್ಟ್ರೀಯ ತರಬೇತಿ ಗುಣಗಾನದೊಂದಿಗೆ ಮನ್ವಂತರ-2023 (ಸಾಧನೆಯ ಮೈಲಿಗಲ್ಲು) ಕಾರ್ಯಕ್ರಮ ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್‍ನಲ್ಲಿ ಮೇ 27ರ ಸಂಜೆ 4 ಗಂಟೆಯಿಂದ ಮೇ 28 ಸಂಜೆ 5ರ ತನಕ ನಡೆಯಲಿದೆ, ಕಾರಂತ ಥೀಮ್ ಪಾರ್ಕ್‍ನ ಪೇಸ್ ಬುಕ್ ಹಾಗೂ ಯುಟ್ಯೂಬ್ ನಲ್ಲಿ ನೇರ ಪ್ರಸಾರವಾಗಲಿದೆ ಎಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಜೆ.ಸಿ.ಐ ಕಲ್ಯಾಣಪುರ ಅಧ್ಯಕ್ಷೆ ಅನಿತಾ ನರೇಂದ್ರ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.