

ಕೋಟ : ಮಕ್ಕಳ ಮನಸ್ಸುಗಳಲ್ಲಿ ನೂರಾರು ಕನಸುಗಳಿರುತ್ತವೆ, ಅಂತಹ ಕನಸುಗಳು ನನಸಾಗಿಸಲು ಪೋಷಕರ ಪ್ರೋತ್ಸಾಹ ಅಗತ್ಯ, ಇಂದಿನ ಮಕ್ಕಳೆ ಮುಂದಿನ ನವ ಭಾರತದ ಶಿಲ್ಪಿಗಳು ಅವರನ್ನು ಉತ್ತಮ ಪ್ರಜೆಯನ್ನಾಗಿಸುವ ಜವಬ್ದಾರಿ ನಮೆಲ್ಲರ ಮೇಲಿದೆ ಎಂದು ಶಿರಿಯಾರ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಅವರು ಹೇಳಿದರು.
ಅವರು ಶಿರಿಯಾರ ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ, ಶಿರಿಯಾರ, ಶಿರಿಯಾರ ಗ್ರಾಮ ಪಂಚಾಯತ್ ಆಶ್ರಯದಲ್ಲಿ ನಡೆಯುತ್ತಿರುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಅಮಿತಾ, ಸದಸ್ಯರಾದ ಚಂದ್ರ ಶೆಟ್ಟಿ, ವಿಶಾಲ, ಪ್ರಮೀಳಾ, ಕಾರ್ಯದರ್ಶಿ ಆನಂದ ನಾಯ್ಕ ಸಂಪನ್ಮೂಲ ವ್ಯಕ್ತಿ ಮಲ್ಲಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕು.ಸುಮನ ಅವರು ಪ್ರಸ್ತಾಪಿಸಿ ನಿರೂಪಿಸಿ, ಗ್ರಂಥಾಲಯ ಮೇಲ್ವಿಚಾರಕಿ ಅಶ್ವಿನಿ ಸಂಯೋಜಿಸಿದರು.
ಶಿರಿಯಾರ ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ, ಶಿರಿಯಾರ, ಶಿರಿಯಾರ ಗ್ರಾಮ ಪಂಚಾಯತ್ ಆಶ್ರಯದಲ್ಲಿ ನಡೆಯುತ್ತಿರುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವನ್ನು ಶಿರಿಯಾರ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಉದ್ಘಾಟಿಸಿದರು. ಪಂಚಾಯತ್ ಉಪಾಧ್ಯಕ್ಷೆ ಅಮಿತಾ, ಸದಸ್ಯರಾದ ಚಂದ್ರ ಶೆಟ್ಟಿ, ವಿಶಾಲ, ಪ್ರಮೀಳಾ,ಕಾರ್ಯದರ್ಶಿ ಆನಂದ ನಾಯ್ಕ ಸಂಪನ್ಮೂಲ ವ್ಯಕ್ತಿ ಮಲ್ಲಪ್ಪ ಉಪಸ್ಥಿತರಿದ್ದರು.