Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆ ಕೋಟ ಹೋಬಳಿ ಶಾಖೆಯ ನೇತ್ರತ್ವದಲ್ಲಿ ನವಚೇತನ ಸಮಾವೇಶ

ಕೋಟ ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆ ಕೋಟ ಹೋಬಳಿ ಶಾಖೆಯ ನೇತ್ರತ್ವದಲ್ಲಿ ನವಚೇತನ ಸಮಾವೇಶ , ನೂತನ ಪದಾಧಿಕಾರಿಗಳ ಪದಪ್ರದಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಗಾಗಿ ಅವಿರತ ದುಡಿಯುತ್ತಿರುವ ಉಡುಪಿ ಜಿಲ್ಲೆಯ ದಸಂಸ ಮುಖಂಡರಾದ ಜಯನ್ ಮಲ್ಪೆ,ವಾಸುದೇವ ಮುದ್ದೂರು, ಕುಮಾರ್ ಕೋಟ ಇವರುಗಳನ್ನು ಸನ್ಮಾನಿಸಲಾಯಿತು. ದಸಂಸ ಜಿಲ್ಲಾ ಸಂಚಾಲಕ ಟಿ .ಮಂಜುನಾಥ ಗಿಳಿಯಾರು, ಬ್ರಹ್ಮಾವರ ತಾಲೂಕು ದಂಡಾಧಿಕಾರಿ ರಾಜಶೇಖರಮೂರ್ತಿ, ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್,ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಉಡುಪಿ ಜಿಲ್ಲಾ ಪೋಲಿಸ್ ಉಪ ನಿರೀಕ್ಷಕ ಪಿ.ದಿನಕರ್, ದಸಂಸ ಜಿಲ್ಲಾ ಐಕ್ಯ ಹೋರಾಟ ಸಮಿತಿ ಸಂಚಾಲಕರಾದ ಸುಂದರ್ ಮಾಸ್ತರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *