Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬೈಂದೂರು: ಪಂಜರ ಕೃಷಿ ಮೀನು ಸಾಧಕನಿಗೆ ಸಿ.ಎಮ್.ಎಸ್.ಆರ್.ಆಯ್. ನ ಕಾರವಾರ ಪ್ರಾದೇಶಿಕ ಕೇಂದ್ರದಲ್ಲಿ ಸನ್ಮಾನ

ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಡೇರಿ ಗ್ರಾಮದ ರಮೇಶ ಆನಂದ ಖಾರ್ವಿ ಪ್ರಗತಿಪರ ಪಂಜರ ಕೃಷಿ ಮೀನು ಸಾಗಾಣಿಕೆಯಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಯಶಸ್ವಿ ಸಾಧನೆ ಮಾಡಿ ಇಂದು ಕಾರವಾರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆಯ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ರಮೇಶ್ ಖಾರ್ವಿ ಯವರಿಗೆ ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.,

ಪಂಜರ ಕೃಷಿ ಮೀನು ಕೃಷಿಯಲ್ಲಿ ಅಪಾರ ಆಸಕ್ತಿ ತೊಡಗಿಕೊಂಡಿರುವ ಇವರು ಪ್ರಾರಂಭದಲ್ಲಿ ತಮ್ಮ ಮನೆಯ ಸಮೀಪದ ಎಡಮಾವಿನಹೊಳೆ ನದಿಯಲ್ಲಿ ನೈಸರ್ಗಿಕವಾಗಿ ಮೀನುಮರಿಗಳನ್ನು ಹಿಡಿದು ಕಷ್ಟುರ ಬೇಸ್ಥ ಎಕ್ವಾಕಲ್ಟರ ಸಿ.ಬಿ.ಎ. ಮಾದರಿಯಲ್ಲಿ ಪಂಜರಗಳಲ್ಲಿ ಮಿಶ್ರ ಮೀನುಗಳನ್ನು ಬೆಳೆಸಿದರು. ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ 2017 – 18 ರಲ್ಲಿ ಎನ್.ಎಫ್.ಡಿ.ಬಿ. ಪ್ರಾಯೋಜಕತ್ವದ ಅಡಿಯಲ್ಲಿ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ಕಾರವಾರ ಸಂಶೋಧನಾ ಕೇಂದ್ರದ ಪಂಜರ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತರಬೇತಿ ಪಡೆದರು. 2017 -18 ಎನ್.ಎಫ್.ಡಿ.ಬಿ. ಯೋಜನೆಯ ಫಲಾನುಭವಿಯಾಗಿ ಆಯ್ಕೆಗೊಂಡು ನೀರಿನ ಪಂಜರಕೃಷಿಯನ್ನು ಯಶಸ್ವಿಯಾಗಿ ಕೈಗೊಂಡರು.

ಹೌದು ನಿರಂತರವಾಗಿ ಪಂಜರ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು 2021 -22 ರಲ್ಲಿ ಸಿ.ಎಮ್.ಎಫ್.ಆರ್.ಆಯ್. ಕಾರವಾರ ಸಂಶೋಧನಾ ಕೇಂದ್ರದ ಆಲ್ ಇಂಡಿಯಾ ನೆಟ್ ವರ ಯೋಜನೆಯ ಫಲಾನುಭವಿಯಾಗಿ ಆಯ್ಕೆಗೊಂಡು ಸಂಸ್ಥೆಯ ಮಾರ್ಗದರ್ಶನದಲ್ಲಿ ಪಂಜರದಲ್ಲಿ ಮೀನುಗಳ ಸಾಗಾಣಿಕೆಯ ಜೊತೆಗೆ ನೀಲೇಕಲ್ಲುಗಳನ್ನು ಇಮ್ಯಾ ಇಂಟೆಗ್ರೇಟೆಡ್ ಮಲ್ಟಿಟೋಫಿಕ್ ಏಕ್ಯಾಕಲ್ಟರ್ ಸಮಗ್ರ ಬಹುರೂಪ ಜಲಕೃಷಿ ಮಾದರಿಯಲ್ಲಿ ಯಶಸ್ವಿಯಾಗಿ ಬೆಳೆಸಿರುತ್ತಾರೆ.

ರಮೇಶ್ ಖಾರ್ವಿ ಯವರ ಸಾಧನೆ ಗುರುತಿಸಿ ಕಾರವಾರದಲ್ಲಿ ಇಂದು ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆಯ ಈ ಸಂದರ್ಭದಲ್ಲಿ ಪ್ರಗತಿಪರ ಮೀನು ಕೃಷಿಕರಾಗಿರುವ ಶ್ರೀ ರಮೇಶ ಖಾರ್ವಿ ಕೋಡೇರಿಯವರನ್ನು ಸಿ.ಎಮ್.ಎಸ್.ಆರ್.ಆಯ್. ನ ಕಾರವಾರ ಪ್ರಾದೇಶಿಕ ಕೇಂದ್ರವು ಹೆಮ್ಮೆಯಿಂದ ಗೌರವಿಸಿ ಸನ್ಮಾನಿಸಿದರು,

Leave a Reply

Your email address will not be published. Required fields are marked *