
ಕೋಟ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡಹಡು ಪಾಂಡೇಶ್ವರ ಇದರ 11ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಕೆಸರು ಗದ್ದೆ ಸಂಭ್ರಮ ಕಾರ್ಯಕ್ರಮ ಭಾನುವಾರ ಮೂಡಹಡು ಪರಿಸರದಲ್ಲಿ ನಡೆಯಿತು.
ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಾಂಡೇಶ್ವರ ಮೂಡಹಡು ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಜಯ ಆಚಾರ್ ಅಧ್ಯಕ್ಷತೆ ವಹಿಸಿದ್ದರು
ಮುಖ್ಯ ಅತಿಥಿಯಾಗಿ ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನ ಧರ್ಮದರ್ಶಿ ರಮೇಶ್ ರಾವ್ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾಂಡೇಶ್ವರ ಒಕ್ಕೂಟದ ಅಧ್ಯಕ್ಷೆ ಸೀಮಾ ವಿಜಯ ಪೂಜಾರಿ , ಪಾಂಡೇಶ್ವರ ಗ್ರಾಮಪಂಚಾಯತ್ ಸಂಜೀವಿನಿ ಸಂಘದ ಅಧ್ಯಕ್ಷೆ ಲೀಲಾವತಿ ಗಂಗಾಧರ್ ,ಸ್ಥಳೀಯ ಉದ್ಯಮಿ ಶೇಖರ್ ಪೂಜಾರಿ ಮೂಡಕಟ್ಟು ಮನೆ,ಸಿವಿಲ್ ಕಂಟ್ರಾಕ್ಟರ್ ಎಂ.ಸಿ ಚಂದ್ರಶೇಖರ್ ,ಪಾಂಡೇಶ್ವರ ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಮೋಹನ ,ಪಾಂಡೇಶ್ವರ ಮೂಡಹಡು ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ನಾರಾಯಣ.ವಿ ಅಚಾರ್, ರವಿ ಪೂಜಾರಿ, ಭವಾನಿ ಬಿಲ್ಡರ್ಸ್, ಉಡುಪಿ ಮಾಲಿಕ ಪುನೀತ್ ಆಚಾರ್, ಸಾಂಸ್ಕ್ರತಿಕ ಚಿಂತಕ ಅಲ್ವಿನ್ ಆಂದ್ರಾದೆ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಭಿಜಿತ್ ಪಾಂಡೇಶ್ವರ ನಿರೂಪಿಸಿದರು. ಕೆಸರು ಗದ್ದೆಯಲ್ಲಿ ವಿವಿಧ ಬಗೆಯ ಆಟೋಟ ಸ್ಪರ್ಧೆಗಳು ನಡೆಯಿತು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡಹಡು ಪಾಂಡೇಶ್ವರ ಇದರ 11ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಕೆಸರು ಗದ್ದೆ ಸಂಭ್ರಮ ಕಾರ್ಯಕ್ರಮವನ್ನು ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಾಂಡೇಶ್ವರ ರಕ್ತೇಶ್ವರಿ ದೇವಸ್ಥಾನ ಧರ್ಮದರ್ಶಿ ರಮೇಶ್ ರಾವ್ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಾಂಡೇಶ್ವರ ಒಕ್ಕೂಟದ ಅಧ್ಯಕ್ಷೆ ಸೀಮಾ ವಿಜಯ ಪೂಜಾರಿ , ಪಾಂಡೇಶ್ವರ ಗ್ರಾಮಪಂಚಾಯತ್ ಸಂಜೀವಿನಿ ಸಂಘದ ಅಧ್ಯಕ್ಷೆ ಲೀಲಾವತಿ ಗಂಗಾಧರ್ ಮತ್ತಿತರರು ಇದ್ದರು.
Leave a Reply