
ಬಂಟ್ವಾಳ : ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಇದರ 2023-24ರ ಸಾಲಿನ ಅಧ್ಯಕ್ಷರಾಗಿ ಮೋಹನ್ ಜಿ ಮೂಲ್ಯ ಸಿದ್ದಕಟ್ಟೆ ಆಯ್ಕೆಯಾಗಿದ್ದಾರೆ.
ಸಮಿತಿ ಕಾರ್ಯದರ್ಶಿಯಾಗಿ ಸುನಿಲ್ ಸಿಕ್ವೇರಾ, ಕೋಶಾಧಿಕಾರಿಯಾಗಿ ಪದ್ಮನಾಭ ಕೆ, ಉಪಾಧ್ಯಕ್ಷರಾಗಿ ಸಚ್ಚಿದಾನಂದ ಭಟ್ ಪದಾಧಿಕಾರಿಗಳಾಗಿ ದುರ್ಗಾದಾಸ್ ಶೆಟ್ಟಿ, ರಾಜೇಶ್ ನೆಲ್ಯಾಡಿ, ಭರತ್ ಕುಮಾರ್, ರವೀಂದ್ರ ನಾಯಕ್, ರತೀಶ್ ಶೆಟ್ಟಿ, ಡಾ.ಶ್ರೀಧರ ಶೆಟ್ಟಿ , ಡಾ.ಕೃಷ್ಣಮೂರ್ತಿ, ವಿನಯ ಚಂದ್ರ ಜೈನ್,ಶಿವಯ್ಯ ಎಸ್ ಎಲ್ , ಕೇಶವ ಪೂಜಾರಿ, ವಲೇರಿಯನ್ ಲೋಬೋ, ನೋಣಯ ಶೆಟ್ಟಿಗಾರ್ , ಹರೀಶ್. ಕೆ, ಸಂತೋಷ್ ಶೆಟ್ಟಿ, ಪ್ರವೀಣ್ ಕ್ರಾಸ್ತಾ, ಜಾಸನ್ ಫೆರ್ನಾಂಡಿಸ್ ಜನಾರ್ದನ ನಾಯ್ಕ್, ದಿನೇಶ್ ಸುವರ್ಣ ಮತ್ತು ವಿನೋದ್ ಪಿಂಟೋ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಮೋಹನ್ ಜಿ ಮತ್ತು ಇವರ ತಂಡದ ಪದಗ್ರಹಣ ಸಮಾರಂಭ ಜುಲೈ 11ರಂದು ಸಂಜೆ 6:45 ಕ್ಕೆ ಸಿದ್ದಕಟ್ಟೆ ಸೈಂಟ್ ಪ್ಯಾಟ್ರಿಕ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ. ನಿಯೋಜಿತ ಜಿಲ್ಲಾ ಗವರ್ನರ್ ರೊಟೇರಿಯನ್ ವಿಕ್ರಮ್ ದತ್ತ ಇವರು ಪದಗ್ರಹಣ ನಡೆಸಿಕೊಡಲಿರುವರು. ಬ್ಯಾಂಕ್ ಆಫ್ ಬರೋಡದ ನಿವೃತ್ತ ಅಧಿಕಾರಿ ಸೋಮಯ್ಯ ಎಚ್ ಮುಖ್ಯ ಅತಿಥಿ ಯಾಗಲಿದ್ದಾರೆ, ನಿಕಟಪೂರ್ವ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ , ರಂಗನಾಥ ಭಟ್, ಸಹಾಯಕ ಗವರ್ನರ್ ಡಾ. ರಮೇಶ , ಇಲಿಯಸ್ ಸ್ಯಾಂತೀಸ್, ರಾಘವೇಂದ್ರ ಭಟ್, ಡಾ.ಸುದೀಪ್ , ಕ್ಲಬ್ ಅಡ್ವೈಸರ್ ಜೆರಾಲ್ಡ್ ಡಿ ಕೋಸ್ತ, ಸ್ಥಾಪಕ ಅಧ್ಯಕ್ಷ ಹಾಗೂ ಝೋನಲ್ ಲೆಫ್ಟಿನೆಂಟ್ ಮೈಕಲ್ ಡಿ ಕೋಸ್ತ, ನಿಕಟ ಪೂರ್ವ ಅಧ್ಯಕ್ಷ ಗಣೇಶ್ ಶೆಟ್ಟಿ ಹಾಗೂ ರೋಟರಿ ಜಿಲ್ಲೆ 3181 ಇದರ ಪದಾಧಿಕಾರಿಗಳು ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Leave a Reply