
ಕೋಟ; ತೆಕ್ಕಟ್ಟೆ ಗ್ರಾಮ ಪಂಚಾಯತಿಯಲ್ಲಿ ದಲಿತ ಸಮುದಾಯಕ್ಕೆ ಮೀಸಲಿಟ್ಟ ಹುದ್ದೆಯನ್ನು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಸಾಮಾನ್ಯ ಮೀಸಲಾತಿಯಡಿ ನೇಮಕಕ್ಕೆ ಮುಂದಾಗಿರುವ ವಿಚಾರ ತಿಳಿದು ಉಡುಪಿ ಜಿಲ್ಲೆ ಐಕ್ಯ ಹೋರಾಟ ಸಮಿತಿ ಈ ಹುದ್ದೆಯನ್ನು ದಲಿತ ಸಮುದಾಯಕ್ಕೆ ನೀಡಬೇಕೆಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ದೇವಾಡಿಗರಿಗೆ ಮನವಿ ಸಲ್ಲಿಸಿತು. ಐಕ್ಯ ಹೋರಾಟ ಸಮಿತಿಯ ಸದಸ್ಯರಾದ ಶ್ಯಾಮ ಸುಂದರ ತೆಕ್ಕಟ್ಟೆ ಶ್ರೀನಿವಾಸ ಮಲ್ಯಾಡಿ ವೈಕುಂಠ ಕೊಮೆ ಸ್ಥಳೀಯ ದಲಿತ ಮುಖಂಡರು ಉಪಸ್ಥಿತರಿದ್ದರು
Leave a Reply