
ಕೋಟ: ರಾಹುಲ್ ಗಾಂಧಿ ಅವರಿಗೆ ನೀಡಿರುವ ಶಿಕ್ಷೆ ಹಾಗೂ ಲೋಕಸಭಾ ಸದಸ್ಯತ್ವ ಸ್ಥಾನದ ಅನರ್ಹತೆಯನ್ನು ಖಂಡಿಸಿ ಬುಧವಾರ ಸಾಲಿಗ್ರಾಮ ಬಸ್ ಸ್ಟಾಂಡ್ ಬಳಿ ಕೋಟ ಬ್ಲಾಕ್ ಕಾಂಗ್ರೆಸ್ ಮೌನ ಪ್ರತಿಭಟನೆ ಹಮ್ಮಿಕೊಂಡಿತು. ಪ್ರತಿಭಟನೆಯ ನೇತ್ರತ್ವವನ್ನು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ವಹಿಸಿದರು. ಸಾಲಿಗ್ರಾಮ ಬಸ್ ನಿಲ್ದಾಣದ ಬಳಿ ಮಹಾತ್ಮ ಗಾಂಧಿಜೀ ಭಾವಚಿತ್ರಕ್ಕೆ ಪುಷ್ಭನಮನಗೈದ ನೂರಾರು ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ,ಬಿತ್ತಿಪತ್ರ ಹಿಡಿದು ತಮ್ಮ ನಾಯಕನ ವಿರುದ್ಧ ಬಿಜೆಪಿಯ ಷಡ್ಯಂತರನ್ನು ಖಂಡಿಸಿದರು.
ಈ ವೇಳೆ ಕೋಟ ಬ್ಲಾಕ್ ಕಾಂಗ್ರೆಸ್ ಮುಖಂಡರಾದ ರವೀಂದ್ರ ಕಾಮತ್, ಚಿತ್ತರಂಜನ್ ಶೆಟ್ಟಿ, ರಮಾನಂದ ಶೆಟ್ಟಿ ಬಾರಕೂರು, ಬಿ.ಕೆ ತೇಜ ಪೂಜಾರಿ, ಬಸವ ಪೂಜಾರಿ, ಬಾಲಕೃಷ್ಣ ಪೂಜಾರಿ, ರೋಷನಿ ಒಲಿವೇರ, ದಿನೇಶ್ ಬಂಗೇರ, ವೈ ಬಿ ರಾಘವೇಂದ್ರ, ನಜೀರ್ ಬಾರಕೂರು, ಅಜಿತ್ ಶೆಟ್ಟಿ ಯಾಳಹಕ್ಲು, ರೇಖಾ ಪಿ ಸುವರ್ಣ, ಲೀಲಾವತಿ ಗಂಗಾಧರ, ಮಿನಾಕ್ಷಿ ಐರೋಡಿ, ಚಂದ್ರ ಆಚಾರ್, ಸುರೇಶ್ ಪೂಜಾರಿ, ಶ್ರೀಕಾಂತ್ ಆಚಾರ್, ನರಸಿಂಹ ದೇವಾಡಿಗ, ರತ್ನಾಕರ ಶ್ರೀಯಾನ್ ಪಡುಕರೆ, ದೇವೇಂದ್ರ ದೇವಾಡಿಗ, ರಘು ಶೆಟ್ಟಿ, ಸುನೀಲ್ ಹಿಲಿಯಾಣ, ನರಸಿಂಗ ತಿಂಗಳಾಯ, ಗಣೇಶ್ ನೆಲ್ಲಿಬೆಟ್ಟು, ಸೂರ್ಯಕಾಂತ್ ಶೆಟ್ಟಿ, ಮಹಾಬಲ ಮಡಿವಾಳ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ರಾಹುಲ್ ಗಾಂಧಿ ಅವರಿಗೆ ನೀಡಿರುವ ಶಿಕ್ಷೆ ಹಾಗೂ ಲೋಕಸಭಾ ಸದಸ್ಯತ್ವ ಸ್ಥಾನದ ಅನರ್ಹತೆಯನ್ನು ಖಂಡಿಸಿ ಕೋಟ ಬ್ಲಾಕ್ ಕಾಂಗ್ರೆಸ್ ಮೌನ ಪ್ರತಿಭಟನೆ ನಡೆಸಿತು. ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್, ಕೋಟ ಬ್ಲಾಕ್ ಕಾಂಗ್ರೆಸ್ ಮುಖಂಡರಾದ ರವೀಂದ್ರ ಕಾಮತ್, ಚಿತ್ತರಂಜನ್ ಶೆಟ್ಟಿ, ರಮಾನಂದ ಶೆಟ್ಟಿ ಬಾರಕೂರು, ಬಿ.ಕೆ ತೇಜ ಪೂಜಾರಿ, ಬಸವ ಪೂಜಾರಿ, ಬಾಲಕೃಷ್ಣ ಪೂಜಾರಿ, ರೋಷನಿ ಒಲಿವೇರ, ದಿನೇಶ್ ಬಂಗೇರ ಮತ್ತಿತರರು ಇದ್ದರು.
Leave a Reply