
ಕೋಟ: ನಾವುಗಳು ಹೆಸರು ಗಳಿಸಲು ತುಂಬಾ ಆಸಕ್ತದಾಯಕರಾಗುತ್ತೇವೆ ಅದೇ ರೀತಿ ನಮ್ಮ ಪರಿಸರವನ್ನು ಹೆಸರಿನಂತೆ ಹಸಿರಾಗಿಸಬೇಕು ಎಂದು ಕೋಟತಟ್ಟು ಗ್ರಾ.ಪಂ ಉಪಾಧ್ಯಕ್ಷ ವಾಸು ಪೂಜಾರಿ ಕರೆ ನೀಡಿದರು.
ಕೋಟತಟ್ಟು ಗ್ರಾಮಪಂಚಾಯತ್ ಆ ಆಶ್ರಯದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಘಟಕ , ಬಾರಿಕೆರೆ ಯುವಕ ಮಂಡಲ ಕೋಟ , ಸಿಂಧೂರ ಸಂಜೀವಿನಿ ಒಕ್ಕೂಟ ಕೋಟತಟ್ಟು, ಗೆಳೆಯರ ಬಳಗ ಹಂದಟ್ಟು, ಮಹಿಳಾಬಳಗ ಹಂದಟ್ಟು,ಎಸ್ ಎಲ್ ಆರ್ ಎಂ ಘಟಕ ಕೋಟತಟ್ಟು ಇವರುಗಳ ಸಹಯೋಗದೊಂದಿಗೆ ರಾಜ್ಯ ಸರಕಾರದ ನಿರ್ದೇಶನದಂತೆ ವನಮಹೋತ್ಸವ ಕಾರ್ಯಕ್ರಮ ಶುಕ್ರವಾರ ಪಂಚಾಯತ್ ನಲ್ಲಿ ಏರ್ಪಡಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿ ಆಧುನಿಕ ಜಗತ್ತಿನಲ್ಲಿ ಕಾಂಕ್ರೀಟ್ ಕಾಡು ಸೃಷ್ಢಿಯಾಗುತ್ತಿದೆ ಇದು ಮನುಷ್ಯನ ಮೇಲೆ ವಿಪರೀತ ದುಷ್ಪರಿಣಾಮ ಬೀರುತ್ತಿದೆ ಇಷ್ಟಾಗಿಯೂ ಮನುಷ್ಯ ಜೀವಿ ಮಾತ್ರ ಇನ್ನೂ ಅರ್ಥೈಸಿಕೊಳ್ಳದ ಕಾಲಘಟ್ಟದಲ್ಲಿ ಜೀವಿಸುತ್ತಿದ್ದಾನೆ ಇದು ವಿಪರ್ಯಾಸವೇ ಸರಿ ಇನ್ನಾದರೂ ಗಿಡ ನೆಟ್ಟು ಅದರ ಆರೈಕೆಯಲ್ಲಿ ತೋಡಗೋಣ ಎಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿದಿನೇಶ್ ವಹಿಸಿ ಗಿಡ ನಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ಮುಖ್ಯ ಅಭ್ಯಾಗತರಾಗಿ ಪಂಚಾಯತ್ ಸದಸ್ಯರಾದ ಪ್ರಕಾಶ್ ಹಂದಟ್ಟು, ವಿದ್ಯಾ ಸಾಲಿಯಾನ್, ರಾಬರ್ಟ್ ನಾಯಕ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ ಅಶೋಕ್, ಬಾರಿಕೆರೆ ಯುವಕ ಮಂಡಲದ ಅಧ್ಯಕ್ಷ ರಂಜೀತ್ ಕುಮಾರ್ , ಸಂಜೀವಿ ಒಕ್ಕೂಟದ ಸುಜಾತ ಉದಯ್ ತಿಂಗಳಾಯ, ವಾಣಿಶ್ರೀ, ಪಂಚಾಯತ್ ಸಿಬ್ಬಂದಿಗಳಾದ ಶಕೀಲ ನಾಗರಾಜ್, ಮಮತಾ ಐತಾಳ್, ನವೀನ ಪೂಜಾರಿ, ರವಿ, ಪಂಚವರ್ಣದ ಗಿರೀಶ್ ಆಚಾರ್, ಶಶಿಧರ, ಮಹಿಳಾ ಘಟಕದ ಲಲಿತಾ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ನಿರೂಪಿಸಿದರು. ಕಾರ್ಯದರ್ಶಿ ಸುಮತಿ ಅಂಚನ್ ವಂದಿಸಿದರು.
ಕೋಟತಟ್ಟು ಗ್ರಾಮಪಂಚಾಯತ್ ಆ ಆಶ್ರಯದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಘಟಕ , ಬಾರಿಕೆರೆ ಯುವಕ ಮಂಡಲ ಕೋಟ , ಸಿಂಧೂರ ಸಂಜೀವಿನಿ ಒಕ್ಕೂಟ ಕೋಟತಟ್ಟು, ಗೆಳೆಯರ ಬಳಗ ಹಂದಟ್ಟು, ಮಹಿಳಾಬಳಗ ಹಂದಟ್ಟು, ಎಸ್ ಎಲ್ ಆರ್ ಎಂ ಘಟಕ ಕೋಟತಟ್ಟು ಇವರುಗಳ ಸಹಯೋಗದೊಂದಿಗೆ ರಾಜ್ಯ ಸರಕಾರದ ನಿರ್ದೇಶನದಂತೆ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
Leave a Reply