
ಕೋಟ: ಕಳೆದ ವಾರ ಸುರಿದ ಬಾರಿ ಗಾಳಿ ಮಳೆಗೆ ಇಲ್ಲಿನ ಕೋಟ ಮೆಸ್ಕಾಂ ವ್ಯಾಪ್ತಿಯ ಚಿತ್ರಪಾಡಿ ಪರಿಸರದ ಹಡಲು ಬಿದ್ದ ಪ್ರದೇಶ ವಿದ್ಯುತ್ ಕಂಬಗಳು ಹಾನಿಗೊಂಡಿದ್ದು ಬಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರಯವ ಹಿನ್ನಲ್ಲೆಯಲ್ಲಿ ಕೋಟ ಮೆಸ್ಕಾಂ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಪವರ್ಮೆನ್ಗಳು ಕಯಾಕಿಂಗ್ ದೋಣಿಯ ಮೂಲಕ ಸರಿಪಡಿಸಲಾಯಿತು,ಪರಿಸರದ ಹತ್ತಾರು ಮನೆಗಳಿಗೆ ಸಂಪರ್ಕಿಸುವ ಈ ವಿದ್ಯುತ್ ತಂತಿ ಹಾನಿಗೊಂಡ ದಿಸೆಯಲ್ಲಿ ಮೆಸ್ಕಾಂ ಸಹಾಯಕ ಇಂಜಿನಿಯರ್ ಪ್ರಶಾಂತ್ ಶೆಟ್ಟಿ ನೇತೃತ್ವದಲ್ಲಿ ಸರಿಪಡಿಸುವ ಕಾರ್ಯ ಸೋಮವಾರ ನಡೆಯಿತು.
ಬಾರಿ ನೆರೆಪೀಡಿಯ ಪ್ರದೇಶವಾದ ಈ ಭಾಗ ನೀರಿನ ಇಳಿಮುಖದ ನೋಡಿ ಈ ಕಾರ್ಯ ಹಮ್ಮಿಕೊಂಡಿತು. ಇವರ ಈ ಸಾಹಸಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.
Leave a Reply