
ಅಗತ್ಯವುಳ್ಳವರಿಗೆ ನೀಡಿದ ಸಹಾಯ ಆತ್ಮ ತೃಪ್ತಿ ತರುತ್ತದೆ. ರೋಟರಿಯ ಸಂಸ್ಥೆಯ ಪರಿಸರ ಸಂರಕ್ಷಣೆ, ರೋಗ ನಿರ್ಮೂಲನೆ, ನೀರಿನ ಸಂರಕ್ಷಣೆ ಹಾಗೂ ಸ್ವಚ್ಛತೆ ಸಾಮಾಜಿಕ ಕಳಕಳಿ, ಇತ್ಯಾದಿ ಏಳು ಪ್ರಮುಖ ಧ್ಯೇಯೋದ್ದೇಶಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂದು, ತಾ.11.07.2023 ರ ಸಂಜೆ ಮಣ್ಣಪಳ್ಳದ ರೋಟರಿ ಸಭಾಂಗಣದಲ್ಲಿ ರೋಟರಿ ಜಿಲ್ಲಾ 3182 ರ 2024-25 ರ ಸಾಲಿನ ನಿಯೋಜಿತ ಅಧ್ಯಕ್ಷ ರೋ.ದೇವಾನಂದ್ ಅವರು ರೋಟರಿ ಮಣಿಪಾಲ ಹಿಲ್ಸ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ನೂತನ ಅಧ್ಯಕ್ಷರಾಗಿ ಸಿ. ರಮಾನಂದ ಭಟ್ ಹಾಗೂ ಕಾರ್ಯದರ್ಶಿಯಾಗಿ ಉ. ಮಾಧವ ಮೈಯ್ಯ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ, ಸಮಾಜ ಸೇವಕ ಉಡುಪಿಯ ಶ್ರೀ ಸತೀಶ ಸುವರ್ಣ ಅವರು ತಮ್ಮ ರಜಾದಿನದಲ್ಲಿ ಪರಿಸರದ ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ವಿಕಲಾಂಗರ ಹಾಸ್ಟೆಲ್ ಗಳ ನಿವಾಸಿಗಳಿಗೆ ಯಾವುದೇ ಪ್ರತಿಪಲಾಕ್ಷೆ ಇಲ್ಲದೆ ಕ್ಷೌರ ಮಾಡಿ ನಿಸ್ಪ್ರಹ ಮಾನವೀಯ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಸನ್ಮಾನಿಸಲಾಯಿತು.
ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಡಾ.ಪಿ ಕೆಂಪರಾಜ್ ಘಟಕದ ಮುಖ ಪತ್ರಿಕೆ ಮಣಿದರ್ಪಣ ವನ್ನು ಅನಾವರಣ ಮಾಡಿದರು. ವಲಯ ಸೇನಾನಿ ರೋ.ತಾರಾ ಶೆಟ್ಟಿಯವರು ಶುಭಾಶಂಸನೆ ಮಾಡಿದರು. ವಲಯ ನಾಲ್ಕರ ಎಲ್ಲಾ ರೋಟರಿ ಕ್ಲಬ್ಬಿನವರು ಶುಭಹಾರೈಸಿದರು. ಕಳೆದ ವರ್ಷದ ರೋಟರಿ ಅಧ್ಯಕ್ಷೆ ರೊ ಸಬಿತಾ ಭಟ್ ಸ್ವಾಗತಿಸಿ, ಕಾರ್ಯದರ್ಶಿ ವಂದನಾ ರಾವ್ ವರದಿ ವಾಚಿಸಿ, ಕೊನೆಯಲ್ಲಿ ರೋ.ಮಾಧವ ಮೈಯ್ಯನವರು ವಂದಿಸಿದರು. ರೋ.ನಾರಾಯಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.
Leave a Reply