
ಕೋಟ: ನಬಾರ್ಡ್ನ ಡಿಡಿಎಮ್ ಸಂಗೀತಾ ಎಸ್. ಕರ್ತಾ, ಇವರ ನೇತೃತ್ವದಲ್ಲಿ ಬ್ರಿಡ್ನಿಂದ ಹೊಸದಾಗಿ ನೇಮಕಗೊಂಡ ವಿವಿಧ ರಾಜ್ಯಗಳ 35 ಅಭಿವೃದ್ಧಿ ಸಹಾಯಕ ಅಧಿಕಾರಿಗಳು ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಇತ್ತೀಚಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಂಘದ ವ್ಯವಹಾರದ ಅಭಿವೃದ್ಧಿ ಕುರಿತು ಸಂಘದ ಅಧ್ಯಕ್ಷ ಜಿ. ತಿಮ್ಮ ಪೂಜಾರಿ ಮಾಹಿತಿ ನೀಡುವಾಗ ಸದಸ್ಯರಿಗೆ ಸಂಘದಿಂದ ದೊರಕುವ ವಿವಿಧ ಯೋಜನೆಗಳು, ಸದಸ್ಯರ ಕಲ್ಯಾಣ ನಿಧಿ, ಜಾನುವಾರು ಮೃತ್ಯತ್ವ ನಿಧಿ ಜೋಡಣೆ ಮತ್ತು ಅನುಷ್ಠಾನದ ಕುರಿತು ವಿವರವಾಗಿ ಮಾಹಿತಿ ನೀಡಿದರು. ಸಾಲ ಪಡೆದ ಗ್ರಾಹಕ ಸದಸ್ಯರು ಮೃತರಾದಲ್ಲಿ ಅವರ ಹೊರಬಾಕಿ ಸಾಲಕ್ಕೆ ಒಂದು ತಿಂಗಳ ಒಳಗೆ ಅವರ ಮನೆಯವರು ಮರುಪಾವತಿ ಮಾಡಿದಲ್ಲಿ ಹೊರಬಾಕಿ ಸಾಲದ ಶೇಕಡಾ 25 – ಗರಿಷ್ಠ ರೂ.2,00,000/-ದ ತನಕ ಸದಸ್ಯರ ಕಲ್ಯಾಣ ನಿಧಿಯಿಂದ ಪ್ರಯೋಜನ ಪಡೆಯುವ ಅವಕಾಶವಿರುವ ಬಗ್ಗೆ ತಿಳಿಸಿದರು.
ಈ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಬ್ರಿಡ್ನ ಅಧಿಕಾರಿಗಳು ಚರ್ಚೆಯ ಮೂಲಕ ವಿಚಾರ ವಿನಿಮಯ ಮಾಡಿಕೊಂಡು ಸಂಘದ ವ್ಯವಸ್ಥಿತ ಕಾರ್ಯವೈಖರಿ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಅಭಿವೃದ್ಧಿಯನ್ನು ಶ್ಲಾಘಿಸಿದರು. ಸಂಘದ ನೂತನ ವಿಶಿಷ್ಟ ಯೋಜನೆಗಳಲ್ಲಿ ಒಂದಾದ ‘ಸಕಲ’ ಕೃಷಿ ಉಪಕರಣಗಳ ಮಾರಾಟ ಮಳಿಗೆಗೆ ಅವರು ಭೇಟಿ ನೀಡಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ ಕುಮಾರ್ ಶೆಟ್ಟಿ ಇವರು ಭೇಟಿ ನೀಡಿದ ಅಧಿಕಾರಿಗಳನ್ನು ಸ್ವಾಗತಿಸಿ ವಂದನಾರ್ಪಣೆಗೈದರು.
ನಬಾರ್ಡ್ನ ಡಿಡಿಎಮ್ ಸಂಗೀತಾ ಎಸ್. ಕರ್ತಾ, ಇವರ ನೇತೃತ್ವದಲ್ಲಿ ಬ್ರಿಡ್ನಿಂದ ಹೊಸದಾಗಿ ನೇಮಕಗೊಂಡ ವಿವಿಧ ರಾಜ್ಯಗಳ 35 ಅಭಿವೃದ್ಧಿ ಸಹಾಯಕ ಅಧಿಕಾರಿಗಳು ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಇತ್ತೀಚಿಗೆ ಭೇಟಿ ನೀಡಿದರು.
Leave a Reply