
ಕೋಟ: ಮಕ್ಕಳಲ್ಲಿ ಭಾಷಾ ಬೆಳವಣಿಗೆ ಹಾಗೂ ಅತ್ಯುತ್ತಮ ಸಂವಹನ ಕೌಶಲ ರೂಢಿಸಲು ಯಕ್ಷಗಾನದ ಕಲಿಕೆ ವಿಶೇಷ ಕೊಡುಗೆ ನೀಡುತ್ತದೆ” ಎಂದು ಕೊಂಕಣ ರೈಲ್ವೆಯ ನಿವೃತ್ತ ಡೆಪ್ಯೂಟಿ ಚೀಫ್ ಇಲೆಕ್ಟ್ರಿಕಲ್ ಇಂಜಿನಿಯರ್ ರಘುನಾಥ ನಾಯಕ್ ಎಣ್ಣೆಹೊಳೆ ನುಡಿದರು. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸಕುತ್ತೂರು ಇಲ್ಲಿ 2023-24 ನೇ ಸಾಲಿನ “ನಿರಂತರ ಯಕ್ಷಗಾನ ತರಗತಿ” ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಕೃಷ್ಣ ಕೆದ್ಲಾಯ ಅಧ್ಯಕ್ಷತೆ ವಹಿಸಿದ್ದರು. ಶಾಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಯಕ್ಷಗಾನ ತರಗತಿಯನ್ನು ನಡೆಸಿಕೊಡುತ್ತಿರುವ ಯಕ್ಷ ಗುರುಗಳಾದ ಐರೋಡಿ ಮಂಜುನಾಥ ಕುಲಾಲ, ಶಾಲಾ ಸಹ ಶಿಕ್ಷಕರಾದ ಸಂಜೀವ ಎಂ, ಜಯಲಕ್ಷ್ಮಿ ಬಿ, ವಿಜಯಾ ಆರ್, ಅಶೋಕ ತೆಕ್ಕಟ್ಟೆ, ವಿಜಯ ಶೆಟ್ಟಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಶೇಖರ ಕುಮಾರ್ ಸ್ವಾಗತಿಸಿದರು. ಸಹಶಿಕ್ಷಕ ರವೀಂದ್ರ ನಾಯಕ್ ನಿರೂಪಿಸಿದರು ಹಾಗೂ ಜಯರಾಮ ಶೆಟ್ಟಿ ವಂದಿಸಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸಕುತ್ತೂರು ಇಲ್ಲಿ 2023-24 ನೇ ಸಾಲಿನ “ನಿರಂತರ ಯಕ್ಷಗಾನ ತರಗತಿಯನ್ನು ಕೊಂಕಣ ರೈಲ್ವೆಯ ನಿವೃತ್ತ ಡೆಪ್ಯೂಟಿ ಚೀಫ್ ಇಲೆಕ್ಟ್ರಿಕಲ್ ಇಂಜಿನಿಯರ್ ರಘುನಾಥ ನಾಯಕ್ ಎಣ್ಣೆಹೊಳೆ ಉದ್ಘಾಟಿಸಿದರು.
Leave a Reply