
ಕೋಟ: ಬಾಳ್ಕುದ್ರು ಶ್ರೀ ಮಠದಲ್ಲಿ ಇಲ್ಲಿನ ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮಿಜಿಗಳ ಚಾತುರ್ಮಾಸ್ಯದ ಹಿನ್ನಲ್ಲೆಯಲ್ಲಿ ಶಿವಳ್ಳಿ ಬ್ರಾಹ್ಮಣ ಸಮಾಜ ಶ್ರೀಂಗೇರಿ ಇಲ್ಲಿನ ಸಮುದಾಯ ವೃಂದ ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು. ಈ ವೇಳೆ ಗುರುಕಾಣಿಕೆ ಅಲ್ಲದೆ ಆಹಾರ ಸಾಮಾಗ್ರಿ ಹೊರೆಕಾಣಿಕೆ ಸಮರ್ಪಿಸಿದರು.

ಶಿವಳ್ಳಿ ಬ್ರಾಹ್ಮಣ ಸಮುದಾಯ ಸಂಘದ ಅಧ್ಯಕ್ಷ ರಾಮಣ್ಣ, ನಾಗಪಯ್ಯ, ಗೌರವಾಧ್ಯಕ್ಷ ತ್ಯಾಗರಾಜ ರಾವ್, ಮಹಿಳಾ ಸಂಘದ ಅಧ್ಯಕ್ಷ ಪದಾಧಿಕಾರಿಗಳು, ಶ್ರೀ ಮಠದ ಅಧ್ಯಕ್ಷ ರಾಜಶೇಖರ ಕಲ್ಕೂರ ಮತ್ತಿತರರು ಇದ್ದರು. ಗುರುವಂದನೆ ಸಭಾಕಾರ್ಯಕ್ರಮವನ್ನು ಸಂಘದ ಕಾರ್ಯದರ್ಶಿ ಬಿ.ಜಿ.ಮುರುಳಿಕೃಷ್ಣ ನಿರ್ವಹಿಸಿದರು. ಸಂಘದ ಪ್ರಮುಖ ಶಿವಶಂಕರ್ ಪ್ರಾಸ್ತಾವನೆ ಸಲ್ಲಿಸಿದರು.
Leave a Reply