ಕೋಟ : ರಾಷ್ಟ್ರೀಯ ಹೆದ್ದಾರಿ 66ರ ಮಣೂರು ಬಾಳೆಬೆಟ್ಟು ಸಮೀಪ ರಿಕ್ಷಾದಿಂದ ಪ್ರಯಾಣಿಕನೋರ್ವ ಆಯಾ ತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.
ಮೃತ ಯುವಕ ಪಾರಂಪಳ್ಳಿಯ ಪಡುಕರೆ ನಿವಾಸಿ ಪ್ರಕಾಶ್ ಪೂಜಾರಿ (40) ಎಂದು ಗುರುತಿಸಲಾಗಿದೆ. ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿರುವ ತಾಯಿಗೆ ರಾತ್ರಿ ಊಟ ತರಲೆಂದು ಕೋಟೇಶ್ವರದಿಂದ ಬಾಡಿಗೆ ರಿಕ್ಷಾ ಮಾಡಿಕೊಂಡು ಪಾರಂಪಳ್ಳಿ ಪಡುಕೆರೆಯ ತನ್ನ ಮನೆಗೆ ಬಂದು ಅದೇ ರಿಕ್ಷಾದಲ್ಲಿ ವಾಪಸು ಹೋಗುವಾಗ ಮಣೂರು ಬಾಳೆಬೆಟ್ಟು ಸಮೀಪ ಆಯ ತಪ್ಪಿ ರಿಕ್ಷಾದಿಂದ ಕೆಳಗೆ ಬಿದ್ದರು.
ತಕ್ಷಣ ಕೋಟ ಜೀವನ್ ಮಿತ್ರದ ನಾಗರಾಜ್ ಪುತ್ರನ್ ಅವರು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ. ಕೋಟ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















Leave a Reply