Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಮತ್ತು ಜೆಸಿಐ ಕಲ್ಯಾಣಪುರ

ಕೋಟ: ಜೆಸಿಐ ಕಲ್ಯಾಣಪುರ ಹಾಗೂ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ ಇವರ ಆಶ್ರಯದಲ್ಲಿ ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟದ ಶಿಕ್ಷಕ ಸಾಹಿತಿ ಜೆಸಿ ನರೇಂದ್ರ ಕುಮಾರ್ ಕೋಟ ಸಾರಥ್ಯದಲ್ಲಿ 25ಗಂಟೆಗಳ ನಿರಂತರ ವ್ಯಕ್ತಿತ್ವ ವಿಕಸನ ಟ್ರೈನಿಂಗ್ ಮ್ಯಾರಥಾನ್ ದಾಖಲೆಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಮಾನ್ಯತೆ ಪಡಿದಿದೆ. ಕಳೆದ ಒಂದು ತಿಂಗಳಿನಿಂದ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಿ ದಾಖಲೆಗೆ ಮಾನ್ಯ ಮಾಡಿದೆ.

ಕಳೆದ ಮೇ ತಿಂಗಳ 27ರ ಸಂಜೆ 4 ಗಂಟೆಯಿಂದ ಮೇ 28ರ ಸಂಜೆ 5ರವರೆಗೆ ಈ ಮ್ಯಾರಥಾನ್ ನಡೆದಿತ್ತು. ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ 26 ತರಬೇತುದಾರರಾದ ಶಿವರಾಮ ಕೆ.ಕೆ., ಅರುಣ್ ಪೀಟರ್ ಪಿಂಟೋ, ಅನಿತಾ ನರೇಂದ್ರ, ಜ್ಯೋತಿ ಪ್ರಶಾಂತ್, ಪ್ರದೀಪ ಬಾಕಿಲ, ರಾಜೇಶ್ ಶೆಣೈ, ರಾಘವೇಂದ್ರ ಚರಣ, ಅಕ್ಷತಾ ಗಿರೀಶ್, ರಾಘವೇಂದ್ರ ಕರ್ವಾಲು, ಶೆರ್ಲಿ ಮನೋಜ್, ಮನೋಜ ಕಡಬ, ಎಮ್.ಎನ್. ನಾಯಕ್, ಡಾ. ಶಿವಪ್ರಸಾದ್, ಸೌಜನ್ಯ ಹೆಗ್ಡೆ, ಪ್ರವೀಣ ಉಡುಪ, ದೀರಜ್ ಉದ್ಯಾವರ, ಗುಣವತಿ ರಮೇಶ್, ವರ್ಷಾ ಕಾಮತ್, ಬಾಲಕೃಷ್ಣ ಪ್ರಭು, ಡಾ. ವಿಜಯ ಸಿಗಲೂರು, ದಾಮೋದರ ಪಾಟಾಲಿ, ಹರಿಶ್ಚಂದ್ರ ಕರ್ಕೆರ, ಪಾಂಡುರಂಗ, ಕೃಷ್ಣ ಪವಾರ್ ಭಾಗವಹಿಸಿದ್ದರು.
ಈ ಮ್ಯಾರಥಾನ್‍ಗೆ ಗಿನ್ನೀಸ್ ರೆಕಾರ್ಡ್ ದಾಖಲಿತ ಪ್ರತ್ವೀಶ್ ಜಿ. ಭಟ್ ಮಾರ್ಗದರ್ಶನ, ಚಿತ್ರೀಕರಣ ಪ್ರಸಾರದ ಜವಾಬ್ದಾರಿಯ ಉಡುಪಿ ಚಾನೆಲ್ ವಹಿಸಿದ್ದು ಕಿರಣ ಮತ್ತವರ ತಂಡ ಸಹಕರಿಸಿತ್ತು.

ವಿಷಯ ನಿಯೋಜನೆಯಲ್ಲಿ ಶಿವರಾಮ ಕೆ.ಕೆ., ಮನೋಜ್ ಕಡಬರವರು, ನಿರೂಪಕರಾಗಿ ಸತೀಶ್ ವಡ್ಡರ್ಸೆ, ಜ್ಯೋತಿ ಸಾಲಿಗ್ರಾಮ, ಸಂಯೋಜನೆಯಲ್ಲಿ ಪ್ರದೀಪ ಬಸ್ರೂರು, ರವೀಂದ್ರ ಶೆಟ್ಟಿ ತಂತ್ರಾಡಿ, ಪ್ರಶಾಂತ್ ಕುಮಾರ್ ಜೊತೆಗಿದ್ದರು. ಮ್ಯಾರಥಾನ್ ಕಾರ್ಯಕ್ರಮ ನಿರ್ದೇಶಕರಾಗಿ ಚಿತ್ರ ಕುಮಾರ್, ಜಗದೀಶ್ ಕೆಮ್ಮಣ್ಣು, ಅಲೆನ್ ರೋಹನ್ ಹಾಜರಿದ್ದರು. ನಿರ್ದೇಶಕರಾಗಿ ಚಿತ್ರ ಕುಮಾರ್, ಜಗದೀಶ್ ಕೆಮ್ಮಣ್ಣು, ಅಲೆನ್ ರೋಹನ್ ಹಾಜರಿದ್ದರು.

ಸಾಂಸ್ಕøತಿಕ ಚಿಂತಕರಾಗಿ ಆನಂದ ಸಿ. ಕುಂದರ್, ಚಿತ್ರ ಕುಮಾರ್, ರಾಜೇಶ್ ಆಚಾರ್ಯ, ವಿಘ್ನೇಶ್ವರ ಅಡಿಗ ಕನಸಿಗೆ ಬಣ್ಣ ತುಂಬಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಅಶ್ವಿನಿ ದಿನೇಶ್ ಉಪಾಧ್ಯಕ್ಷ ವಾಸು ಪೂಜಾರಿ ವಲಯಾಧ್ಯಕ್ಷ ಜೆಸಿ ಪುರುಷೋತ್ತಮ ಶೆಟ್ಟಿ, ವಲಯ ಉಪಾಧ್ಯಕ್ಷೆ ಜಯಶ್ರೀ ಮಿತ್ರ ಕುಮಾರ್ ಅಭಿನಂದನೆ ಸೂಚಿಸಿದ್ದಾರೆ. ಜೆಸಿಐ ಇಂಡಿಯಾ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿ ಈ ದಾಖಲೆ ನಡೆದಿರುವುದು ಜೆಸಿಐ ಸಾಧನೆಯ ಮೈಲಿಗಲ್ಲು ಎಂದು ಜೆಸಿಐ ಕಲ್ಯಾಣಪುರ ಅಧ್ಯಕ್ಷೆ ಅನಿತಾ ನರೇಂದ್ರ, ಕಾರ್ಯದರ್ಶಿ ಲವಿನಾ ಲೂಯಿಸ್, ಜೆಸಿರೇಟ್ ವಿಭಾಗದ ಜ್ಯೂನಿಯರ್ ಜೇಸಿ ನಿರಂತರ ಸಹಕರಿಸಿದವರಿಗೆಲ್ಲ ಅಭಿನಂದನೆ ಸಲ್ಲಿಸಿ, ಶೀಘ್ರವಾಗಿ ಪ್ರಮಾಣಪತ್ರ ಹಸ್ತಾಂತರಿಸುವ ಕಾರ್ಯಕ್ರಮ ನಡೆಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೊಸತನದ ಚಿಂತನೆಗಳು ಕಾರ್ಯರೂಪಕ್ಕೆ ತಂದಾಗ ಸಾಧನೆಯ ಸಾಧ್ಯ ನಿಜವಾಗಿಯೂ ಅಪೂರ್ವವಾದ ಸಾಧನೆಯಿದು. ತರಬೇತುದಾರ ಎಅ ನರೇಂದ್ರ ಕುಮಾರ್ ಕೋಟರವರು ನಿಜವಾಗಿಯೂ ಅಭಿನಂದನೆಗೆ ಅರ್ಹರು. ನಮಗೆಲ್ಲ ತುಂಬು ಸಂತಸ.
ಪುರುಷೋತ್ತಮ ಶೆಟ್ಟಿ ವಲಯಾಧ್ಯಕ್ಷರು

ಸರ್ವರ ಸಹಕಾರದಿಂದ ಈ ಕನಸು ಈಡೇರಿದೆ. ಕಲ್ಪನೆ ನನ್ನದಾದರೂ ಅದಕ್ಕೆ ಬಣ್ಣ ತುಂಬಿದವರು ಹಲವರು. ಎಲ್ಲರಿಗೂ ನನ್ನ ಬದುಕಿನ ಪ್ರೀತಿ ನೀಡುತ್ತಿದ್ದೇನೆ.
ನರೇಂದ್ರಕುಮಾರ್ ಕೋಟ
ಶಿಕ್ಷಕರು-ಸಾಹಿತಿಗಳು, ವಿವೇಕ ಬಾ.ಪ್ರೌಢ ಶಾಲೆ, ಕೋಟ

ನಮ್ಮ ಪ್ರತಿಷ್ಠಾನ ವ್ಯಕ್ತಿತ್ವ ವಿಕಸನ ಮ್ಯಾರಥಾನ್ ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಸೇರಿರುವುದು ನಮಗೆಲ್ಲ ತುಂಬಾ ಖುಷಿ ಕೊಟ್ಟಿದೆ. ನರೇಂದ್ರಕುಮಾರ್ ಕೋಟ ಮತ್ತವರ ತಂಡಕ್ಕೆ ಅಭಿನಂದನೆಗಳು.
ಆನಂದ ಸಿ. ಕುಂದರ್
ಕಾರ್ಯಾಧ್ಯಕ್ಷರು, ಕಾರಂತ ಪ್ರತಿಷ್ಠಾನ

ಕಾರಂತರ ಜೀವಂತಿಕೆ ಪ್ರತಿಬಿಂಬವಾಗಿರುವ ಕೋಟ ಕಾರಂತ ಥೀಂ ಪಾರ್ಕ್‍ನಲ್ಲಿ ಈ ದಾಖಲೆ ನಡೆದಿರುವುದು ನಮಗೆಲ್ಲಾ ತುಂಬಾ ಸಂತೋಷ ತಂದಿದೆ ಇಡೀ ತಂಡಕ್ಕೆ ಅಭಿನಂದನೆಗಳು
ಕೋಟ ಶ್ರೀನಿವಾಸ ಪೂಜಾರಿ
ನಿರ್ದೇಶಕರು, ಕಾರಂತ ಪ್ರತಿಷ್ಠಾನ

Leave a Reply

Your email address will not be published. Required fields are marked *