ಕೋಟ: ಇಲ್ಲಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರøತ ಸಾಹಿತಿ ಡಾ.ಕೋಟ ಶಿವರಾಮ ಕಾರಂತರು ಕಲಿತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಇಲ್ಲಿನ ಮಕ್ಕಳಿ ಶಿಕ್ಷಣದ ಜೊತೆ ರೈತ ಪರಂಪರೆಯ ಭತ್ತದ ನಾಟಿ ಗೈಯುವ ಕುರಿತು ಪಾಠ ಇತ್ತೀಚಿಗೆ ಕೋಟತಟ್ಟು ಪರಿಸರದ ಹಂದಟ್ಟು ಕೃಷಿಭೂಮಿಯಲ್ಲಿ ನಡೆಯಿತು.

ದಿನಂಪ್ರತಿ ಪಾಠಪ್ರವಚನದಲ್ಲೆ ಕಾಲ ಕಳೆಯುವ ಮಕ್ಕಳಿಗೆ ದೇಶದ ಬೆನ್ನಲು ರೈತ ಪರಂಪರೆಯ ಕೃಷಿ ಕಾಯಕದ ತುಡಿತ ಮಿಡಿಯುವ ಭತ್ತದ ನಾಟಿ ಪ್ರಕ್ರೀಯೆ ಅದರ ಅನುಷ್ಠಾನದ ಕುರಿತು ಸ್ಥಳೀಯ ಕೃಷಿಕರ ಸಮ್ಮುಖದಲ್ಲಿ ನಡೆಯಿತು.
ಈ ಕಾಯಕದಲ್ಲಿ ಶಿಕ್ಷಕವೃಂದ ಸಾಥ್ ನೀಡಿ ಕೃಷಿ ಗದ್ದೆಯಲ್ಲೆ ಬೇಸಾಯ ಪದ್ದತಿ,ಅದರಿಂದಾಗುವ ಪ್ರಯೋಜದ ಕುರಿತು ಸಮಗ್ರ ಮಾಹಿತಿ ನೀಡಿದರು. ಸುಮಾರ ಇಪ್ಪತ್ತರಿಂದ ಮೂವತ್ತು ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.

ಕೆಸರ ಗದ್ದೆಯಲ್ಲಿ ವಿದ್ಯಾರ್ಥಿಗಳ ಕಲರವ
ಸಾಮಾನ್ಯವಾಗಿ ಪ್ರಸ್ತುತ ವಿದ್ಯಾಮಾನದಲ್ಲಿ ಪ್ರತಿಯೊಬ್ಬರೂ ತಾನು ತನ್ನ ವಿದ್ಯಾಭ್ಯಾಸದ ನಂತರ ಡಾಕ್ಟರ್ ,ಇಂಜೀನಿಯರ್,ಸರಕಾರಿ ನೌಕರಿ,ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಕುರಿತಂತೆ ಚಿಂತಿಸಿ ಅದರ ಜಾಡು ಹಿಡಿದು ಕೆಲಸ ತನ್ನದಾಗಿಸಿಕೊಳ್ಳುವ ಕಾಲಘಟ್ಟದಲ್ಲಿ ಯಾರೊಬ್ಬರೂ ತಾನು ಊಣಬೇಕಾದ ಕೃಷಿ ಕಾಯಕದ ಕುರಿತಂತೆ ಚಿಂತಿಸದ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಕೃಷಿ ಅವಲಂಬಿತ ದೇಶವಾಗಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿದ್ದಾರೆ.
ಈ ದಿಸೆಯಲ್ಲಿ ವಿದ್ಯಾರ್ಥಿಗಳು ಕೈ ಕೆಸರಾದರೆ ಬಾಯಿ ಮೊಸರೆಂಬಂತೆ ಉಳುಮೆ ಮಾಡಿದ ಕೃಷಿ ಗದ್ದೆಗೆ ಇಳಿದು ಹೀಗೂ ಕೃಷಿ ಕಾಯಕ ಇದೆ ಎಂಬ ಅನುಭವ ಪಡೆದರು.ವಿದ್ಯಾರ್ಥಿಗಳ ಜೊತೆ ಸ್ಥಳೀಯ ಕೃಷಿಕರು ಮಕ್ಕಳೊಂದಿಗೆ ಬೆರೆತು ಕೃಷಿ ಪಾಠ ನೀಡಿದರು.ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಪುಷ್ಭಾವತಿ ಹೊಳ್ಳ, ಸಹಶಿಕ್ಷಕರು, ಶಾಲಾ ಎಸ್ ಡಿ ಎಂಸಿ ಅಧ್ಯಕ್ಷರು, ಪೋಷಕ ವೃಂದ ಉಪಸ್ಥಿತರಿದ್ದರು.
ಇಲ್ಲಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರøತ ಸಾಹಿತಿ ಡಾ.ಕೋಟ ಶಿವರಾಮ ಕಾರಂತರು ಕಲಿತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಇಲ್ಲಿ ನಾಟಿ ಕಾರ್ಯದಲ್ಲಿ ಭಾಗಿಯಾದ ವಿದ್ಯಾರ್ಥಿಗಳು.















Leave a Reply