
ಜು.23ರಂದು ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶೇಡಿಮನೆ ಗ್ರಾಮದ ಗಂಗಾಡ ಬೈಲು ಪ್ರದೇಶದ ಬಡ ಕುಟುಂಬದ ಬಾಲಕಿ ರಚನಾ ಶೆಟ್ಟಿ (12 ವರ್ಷ) ತುಂಬಿ ಹರಿಯುತ್ತಿರುವ ನದಿಯ ಪ್ರವಾಹಕ್ಕೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದು, ಜು.24ರಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧಿಕಾರಿ ವರ್ಗದೊಂದಿಗೆ ಮೃತ ಬಾಲಕಿಯ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿ, ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಮಂಜೂರಾದ ರೂ.5.00 ಲಕ್ಷಗಳ ಮೊತ್ತದ ಚೆಕ್ಕನ್ನು ಬಾಲಕಿಯ ತಾಯಿ ವಿಮಲ ಶೆಟ್ಟಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಹೆಬ್ರಿ ತಹಸೀಲ್ದಾರ ಪುರಂದರ ಹಾಗೂ ಅಧಿಕಾರಿ ವರ್ಗದವರು, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಸದಾನಂದ ಪೂಜಾರಿ ಮತ್ತು ಬಿಜೆಪಿ ಮುಖಂಡ ಸೊರ್ಗೋಳಿ ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು.
Leave a Reply