
ಕೋಟ: ಇಲ್ಲಿನ ಸಾಸ್ತಾನ ಮೆಸ್ಕಾಂ ವ್ಯಾಪ್ತಿಯ ಕಿಣಿಯರ ಕುದ್ರು ಪರಿಸರದಲ್ಲಿ ಬಾರಿ ಗಾತ್ರದ ಮರವೊಂದು ವಿದ್ಯುತ್ ತಂತಿಯ ಮೇಲೆ ಎರಗಿ ಸುಮಾರು ಕಿಮಿಗಳಷ್ಟು ವಿದ್ಯುತ್ ಕೇಬಲ್ ಹಾನಿಗೊಂಡಿದೆ. ಈ ಹಿನ್ನಲ್ಲೆಯಲ್ಲಿ ಆ ಭಾಗದ ಸಾಕಷ್ಡು ಮನೆಗಳು ವಿದ್ಯುತ್ ಸಂಕರ್ಪ ಕಡಿತಗೊಂಡಿದೆ ಈ ದಿಸೆಯಲ್ಲಿ ಸಾಸ್ತಾನ ಮೆಸ್ಕಾಂ ಸಿಬ್ಬಂದಿ ಮಳೆಯನ್ನು ಲಕ್ಕಿಸದೆ ಸೀತಾನದಿಯಲ್ಲಿ ದೋಣಿಯ ಮೂಲಕ ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿಯಿತು.
ಮಳೆಗಾಲದಲ್ಲಿ ಜನಸಾಮಾನ್ಯರು ಮೆಸ್ಕಾಂ ವಿದ್ಯುತ್ ವ್ಯತ್ಯಯ ಎದುರಿಸಬಾರದು ಎಂಬ ಉದ್ದೇಶದಿಂದ ಸಾಸ್ತಾನ ಮೆಸ್ಕಾಂ ಸಿಬ್ಬಂದಿಗಳು ಜೀವದ ಹಂಗು ತೊರೆದು ಸರಿಪಡಿಸುವ ಕಾರ್ಯದ ಹಿನ್ನಲ್ಲೆಗೆ ವ್ಯಾಪಕ ಪ್ರಶಂಸೆಗೆ ಮೆಸ್ಕಾಂ ಸಿಬ್ಬಂದಿ ಪಾತ್ರರಾಗಿದ್ದಾರೆ.
Leave a Reply