
ಕೋಟ: ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಮತ್ತು ಇನ್ನರ್ ವೀಲ್ ಕೋಟ ಸಾಲಿಗ್ರಾಮ ಜಂಟಿ ಆಶ್ರಯದಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ಅಧ್ಯಕ್ಷ ದೇವಪ್ಪ ಪಟಗಾರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರೋಟರಿ ವಲಯ 2ರ ಸಹಾಯಕ ಗವರ್ನರ್ ಕೆ.ನರಸಿಂಹ ಪ್ರಭು ಅವರು ರೋಟರಿ ಧ್ಯೇಹವಾಕ್ಯ ಸಮಾಜದ ಕಟ್ಟ ಕಡೆಯ ವ್ಯಕ್ತಿಯಲ್ಲಿ ಆಶಾ ಕಿರಣವನ್ನು ಮೂಡಿಸುವ ಕೆಲಸಗಳನ್ನು ರೋಟರಿ ಕ್ಲಬ್‍ಗಳು ಮಾಡಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕೋಟದ ಮಕ್ಕಳ ತಜ್ಞ ವೈದ್ಯರಾದ ಡಾ|| ಮಾಧವ ಪೈ ಕೆ. ಮತ್ತು ಸಾಲಿಗ್ರಾಮದ ದಂತ ವೈದ್ಯರಾದ ಡಾ|| ಸರಿತ ಉಪಾಧ್ಯಾಯ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಇನ್ನರ್ ವೀಲ್ ಕಾರ್ಯದರ್ಶಿ ಶಶಿರೇಖ ಸುವರ್ಣ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಪಿ.ಹೆಚ್ ಎಫ್ ರಾಜೇಂದ್ರ ಸುವರ್ಣ ಸ್ವಾಗತಿಸಿದರು. ರೋಟರಿ ಕ್ಲಬ್‍ನ ಮಾಜಿ ಅಧ್ಯಕ್ಷ ಗಣೇಶ ಹೊಳ್ಳ ಸನ್ಮಾನಿತರನ್ನು ಪರಿಚಯಿಸಿದರು. ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ಸರ್ವ ಸದಸ್ಯರು ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು.ರೋಟರಿ ಕ್ಲಬ್ ಕಾರ್ಯದರ್ಶಿ ಜಿ. ತಿಮ್ಮ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಮತ್ತು ಇನ್ನರ್ ವೀಲ್ ಕೋಟ ಸಾಲಿಗ್ರಾಮ ಜಂಟಿ ಆಶ್ರಯದಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕೋಟದ ಮಕ್ಕಳ ತಜ್ಞ ವೈದ್ಯರಾದ ಡಾ|| ಮಾಧವ ಪೈ ಕೆ. ಮತ್ತು ಸಾಲಿಗ್ರಾಮದ ದಂತ ವೈದ್ಯರಾದ ಡಾ|| ಸರಿತ ಉಪಾಧ್ಯಾಯ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಟರಿ ವಲಯ 2ರ ಸಹಾಯಕ ಗವರ್ನರ್ ಕೆ.ನರಸಿಂಹ ಪ್ರಭು ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ಅಧ್ಯಕ್ಷ ದೇವಪ್ಪ ಪಟಗಾರ ,ರೋಟರಿ ಕ್ಲಬ್ ಪಿ.ಹೆಚ್ ಎಫ್ ರಾಜೇಂದ್ರ ಸುವರ್ಣ ಇದ್ದರು.
Leave a Reply