
ಕೋಟ: ಜೆಸಿಐ ಇಂಡಿಯಾ ವಲಯ 15ರ ಬೆಳವಣಿಗೆ, ಅಭಿವೃದ್ಧಿ ಮತ್ತು ವ್ಯವಹಾರ ಸಮ್ಮೇಳನ ‘ವೃದ್ಧಿ’ ಜೂ.23ರಂದು ಜೆಸಿಐ ಶಂಕರನಾರಾಯಣ ಆತಿಥ್ಯದಲ್ಲಿ ಹಾಲಾಡಿಯ ಶಾಲಾನಿ ಜಿ. ಶಂಕರ್ ಕನ್‍ವೆಶ್ಯನ್ ಸೆಂಟರ್‍ನಲ್ಲಿ ಜೆಸಿಐ ಕಲ್ಯಾಣಪುರ ಜಿ&ಡಿ ಟಾಪ್-10 ವಿಭಾಗದಲ್ಲಿ ಜೆಸಿಐ ಕಲ್ಯಾಣಪುರ ಟಾಪ್-1 ಪ್ರಶಸ್ತಿಯನ್ನು ಹಾಗೂ ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಪ್ರಶಸ್ತಿಯನ್ನು ನೀಡಿದರು. ಅಧ್ಯಕ್ಷೆ ಅನಿತಾ ನರೇಂದ್ರಕುಮಾರ್ ಕೋಟ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜೆಸಿಐ ಫೌಂಡೇಶನ್ ನಿರ್ದೇಶಕರಾದ ಅಲನ್ ರೋಹನ್ ವಾಜ್, ವಲಯ ಉಪಾಧ್ಯಕ್ಷರಾದ ಜಯಶ್ರೀ ಮಿತ್ರಕುಮಾರ್, ಸ್ಥಾಪಕಾಧ್ಯಕ್ಷರಾದ ಜಗದೀಶ ಕೆಮ್ಮಣ್ಣು, ಪೂರ್ವಾಧ್ಯಕ್ಷ ಚಿತ್ರಕುಮಾರ್,ತುಳಸೀದಾಸ್ ಸಾಲಿಯಾನ್, ಮಿತ್ರಕುಮಾರ್, ಅರುಣ್ ಕುಮಾರ್, ಪ್ರಶಾಂತ್ ಆಚಾರ್ಯ, ಉಮೇಶ ಅಮಿನ್, ವಿಜಯ ಸುವರ್ಣ, ಆಶಾ ಅಲನ್, ಶ್ವೇತಾ ಅರುಣ್, ಜ್ಯೂನಿಯರ್ ಜೇಸಿ ಅಧ್ಯಕ್ಷ ನಿರಂತರ ಎನ್. ಹಾಗೂ ಜೆಸಿಐ ಕಲ್ಯಾಣಪುರದ ಹಲವು ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜೆಸಿಐ ಇಂಡಿಯಾ ವಲಯ 15ರ ಬೆಳವಣಿಗೆ, ಅಭಿವೃದ್ಧಿ ಮತ್ತು ವ್ಯವಹಾರ ಸಮ್ಮೇಳನ ‘ವೃದ್ಧಿ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಅನಿತಾ ನರೇಂದ್ರಕುಮಾರ್ ಕೋಟ ಪ್ರಶಸ್ತಿಯನ್ನು ಸ್ವೀಕರಿಸಿದರು
Leave a Reply