
ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಣಿಪುರದ ಘಟನೆ ಖಂಡಿಸಿ ಸಾಲಿಗ್ರಾಮದಲ್ಲಿ ಬೃಹತ್ ಪ್ರತಿಭಟನೆ.
ಕೋಟ: ದೇಶವೇ ತಲೆತಗ್ಗಿಸುವಂತಹ ,ನಾಗರಿಕ ಸಮಾಜದ ಮನ ಕಲುಕುವ ಹಿಂಸಾಚಾರಕ್ಕೆ ಮಣಿಪುರ ಬಲಿಯಾಗಿದೆ, ದೇಶದ ಒಕ್ಕೂಟ ವ್ಯವಸ್ಥೆಯನ್ನು ತಲ್ಲಣಗೊಳಿಸಿರುವ ಘಟನೆಗೆ ಬಿಜೆಪಿ ನೇತ್ರತ್ವದ ಸರಕಾರವೇ ನೇರ ಹೊಣೆ ಜನರ ಜೀವದ ಜತೆ ಚಲ್ಲಾಟ ಆಡುತ್ತಿದೆ ಇಂಥಹ ಸರಕಾರವನ್ನು ಕಿತ್ತೊಗೆಯಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ ಹೇಳಿದರು.
ಶುಕ್ರವಾರ ಮಣಿಪುರ ರಾಜ್ಯದ ನಾಗರಿಕರ ಪರವಾಗಿ ಮತ್ತು ಆಡಳಿತಾರೂಢ ರಾಜ್ಯ ಹಾಗೂ ಕೇಂದ್ರ ಬಿ.ಜೆ.ಪಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಕಾರ್ಯಕ್ರಮವನ್ನು ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ, ಸಾಲಿಗ್ರಾಮ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ ವಿಶ್ವದ ಎದುರು ತಲೆ ತಗ್ಗಿಸುವ ಕಾರ್ಯ ಕೇಂದ್ರ ಸರಕಾರ ಮಾಡುತ್ತಿದೆ, ಮಣಿಪುರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಅಲ್ಲಿನ ಜನಸಮುದಾಯದೊಳಗೆ ಎತ್ತಿಕಟ್ಟಿ ಪ್ರಜಾಪ್ರಭುತ್ವವನ್ನು ಕಗ್ಗೋಲೆ ಮಾಡುವ ಕಾರ್ಯ ಬಿಜೆಪಿ ನೇತ್ರತ್ವದ ಸರಕಾರ ಮಾಡುತ್ತಿರುವುದು ನಾಚಿಕೆಗೆಡಿನ ಕೆಲಸವಾಗಿದೆ, ಹಿಂದುತ್ವದ ಹೆಸರಿನಲ್ಲಿ ಜನರನ್ನು ಒಡೆದು ಆಳುವ ಬಿಜೆಪಿ ಮಣಿಪುರದ ಘಟನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಇದೊಂದು ಹೇಯ ಕೃತ್ಯವಾಗಿದೆ.
ಇದರ ವಿರುದ್ಧ ರಾಷ್ಟ್ರಾದ್ಯಂತ ಕಾಂಗ್ರೆಸ್ ಹೋರಾಟ ನಡೆಸಿ ಅಲ್ಲಿನ ಜನರಿಗೆ ನ್ಯಾಯ ದೊರಕಿಸಲಿದೆ ನರೇಂದ್ರ ಮೋದಿ ಸರಕಾರ ರಾಷ್ಟ್ರದ ಭದ್ರತೆಯಲ್ಲಿ ಸಂಪೂರ್ಣವಾಗಿ ಎಡವಿದೆ ಇವರು ಆಡಳಿತ ನಡೆಸಲು ಯೋಗ್ಯರಲ್ಲ ಎಂದು ದೊಂಬಿ ಹಾಗೂ ಬೆತ್ತಲೆ ಪ್ರಕರಣವನ್ನು ಖಂಡಿಸಿದರು. ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್ ಪ್ರಾಸ್ತಾವನೆ ಸಲ್ಲಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಕಿಶನ್ ಹೆಗ್ಡೆ ಕೊಲ್ಕೆಬೈಲು, ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ರೇಖಾ ಪಿ ಸುವರ್ಣ, ಉಡುಪಿ ಜಿಲ್ಲಾ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷರಾದ ತಿಮ್ಮ ಪೂಜಾರಿ ಕೋಟ, ಕಿಶೋರ್ ಕುಮಾರ್ ಶೆಟ್ಟಿ ಮೈರ್ ಕೊಮೆ ಮಂದಾರ್ತಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದಸ್ಯರಾದ ರವೀಂದ್ರ ಕಾಮತ್ ಗುಂಡ್ಮಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಸದಸ್ಯರಾದ ದಿನೇಶ್ ಬಂಗೇರ ಗುಂಡ್ಮಿ, ರಾಜ್ಯ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ಯಾಳಹಕ್ಲು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಉಡುಪಿ ಜಿಲ್ಲಾಧ್ಯಕ್ಷರಾದ ರೋಷನಿ ಒಲೆವೆರಾ,ಕೋಟ ಬ್ಲಾಕ್ ಕಾಂಗ್ರೆಸ್ ಯೂತ್ ಅಧ್ಯಕ್ಷರಾದ ಸುನಿಲ್ ಮಡಿವಾಳ ಹಿಲಿಯಾಣ, ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಲ್ಪನಾ ಪೂಜಾರಿ, ಕೋಟ ಬ್ಲಾಕ್ ಕಾಂಗ್ರೆಸ್ ಎಸ್ಸಿಎಸ್ಟಿ ಘಟಕ ಅಧ್ಯಕ್ಷರಾದ ಶ್ರೀನಿವಾಸ್ ವಡ್ಡರ್ಸೆ, ಕುಂದಾಪುರ ವಿಧಾನಸಭಾ ಕ್ಷೇತ್ರದ NSUI ಘಟಕದ ಅಧ್ಯಕ್ಷರಾದ ಸುಜನ್ ಶೆಟ್ಟಿ ಕುಂದಾಪುರ, ಸರಿತಾ ಶೆಟ್ಟಿ ವಡ್ಡರ್ಸೆ, ಕೋಟ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ನಜಿರ್ ಬಾರ್ಕುರ್, ವಡ್ಡರ್ಸೆ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರ ಶೆಟ್ಟಿ ವಡ್ಡರ್ಸೆ, ವಾಸು ಕೋಟ್ಯಾನ್ ಹಂಗಾರಕಟ್ಟೆ, ಕಾಂಗ್ರೆಸ್ ಯುವ ಮುಖಂಡರಾದ ನಟರಾಜ್ ಹೊಳ್ಳ,ಕೋಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅಂಥೋನಿ ಕೋಡಿ, ಸದಾನಂದ ಗಿಳಿಯಾರು, ಮಂಜುನಾಥ ಕುಲಾಲ್ ಬಿಲ್ಲಾಡಿ, ರಾಜ್ಯ ಮೀನುಗಾರರ ಸಂಘಟನಾ ಕಾರ್ಯದರ್ಶಿ ರಮೇಶ್ ತಿಂಗಳಾಯ ಕೊಡಿ ಬೆಂಗ್ರೆ,ಪಾಂಡೇಶ್ವರ ಗ್ರಾಮ ಪಂಚಾಯತ್ ಸದಸ್ಯರಾದ ವೈ. ಬಿ. ರಾಘುವೇಂದ್ರ ಎಡಬೆಟ್ಟು, ಹಿರಿಯ ಕಾಂಗ್ರೆಸ್ ಮುಖಂಡರಾದ ಬಸವ ಪೂಜಾರಿ ಗುಂಡ್ಮಿ, ಜಾನ್ ಪಿಕೋರ್ಡ್ ಬಾರಕೂರು, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಮಹಾಬಲ ಮಡಿವಾಳ, ಕೋಟ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಶ್ರೀಕಾಂತ್ ಆಚಾರ್ ಪಾಂಡೇಶ್ವರ, ಬಾರಕೂರು ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಪೂಜಾರಿ ಬಾರಕೂರು, ಕೋಟತಟ್ಟು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸುರೇಶ ಚಚ್ಕೆರೆ, ವಸಂತ ಸುವರ್ಣ ಕೋಟ, ನಾರಾಯಣ ಮೆಂಡನ್ ಮಣೂರು, ಗೋಪಾಲ ಮೊಗವೀರ ಕೋಟ, ಜಗನಾಥ್ ಅಮೀನ್ ತೊಡಕಟ್ಟ್, ಸಂತೋಷ ಹಿಲಿಯಾಣ, ಚಂದ್ರ ಹಂದಟ್ಟು, ಸುಬ್ಬಣ್ಣ ಹಂದಟ್ಟು, ಅಜಿತ್ ಗಿಳಿಯಾರ್, ಪ್ರಶಾಂತ್ ಪೂಜಾರಿ ಬಿಲ್ಲಾಡಿ, ನಾರಾಯಣ ಬಿಲ್ಲಾಡಿ, ಸುಧೀರ್ ಬಿಲ್ಲಾಡಿ, ಪ್ರಕಾಶ್ ಬಿಲ್ಲಾಡಿ, ವಿನಯ್ ಯಡ್ತಾಡಿ, ಸಚಿನ್ ಶೆಟ್ಟಿ ವಡ್ಡರ್ಸೆ, ನಿತ್ಯಾನಂದ ಹಂಗಾರಕಟ್ಟೆ, ಸಿಂತೀಯ ಬಾಲ್ಕುದ್ರು, ರವಿ ಪೂಜಾರಿ ಕೋಟ, ನಾಗೇಂದ್ರ ಪುತ್ರನ್ ಬಾರಿಕೆರೆ, ರಾಘುವೇಂದ್ರ ಪೂಜಾರಿ ಒಣಿಮನೆ, ಜಗನಾಥ್ ಪೂಜಾರಿ ಪಾರಂಪಳ್ಳಿ, ಪ್ರಕಾಶ್ ಭಂಡಾರಿ ಅಚ್ಲಾಡಿ, ಶಂಕರ್ ಮರಾಠಿ, ಪಾಂಡೇಶ್ವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅಭಿಜಿತ್ ಪೂಜಾರಿ ಪಾಂಡೇಶ್ವರ, ರತ್ನಾಕರ್ ಶ್ರೀಯಾನ್ ಪಡುಕೆರೆ, ರಾಘುವೇಂದ್ರ ನಾಯರಿ ಕಾರ್ತಟ್ಟು, ಕಾಡೂರು ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ ಮೊಗವೀರ, ವೀಣಾ, ಗುಲಾಬಿ, ರಘು ಶೆಟ್ಟಿ ಯಡ್ತಾಡಿ, ರಘು ಭಂಡಾರಿ ಕುಂಜಿಗುಡಿ, ಶ್ರೀನಿವಾಸ್ ಶೆಟ್ಟಿ ವಡ್ಡರ್ಸೆ, ರಾಜು ಪೂಜಾರಿ ತೊಡಕಟ್ಟು ಪಾರಂಪಳ್ಳಿ, ಗಣೇಶ್ ಶೆಟ್ಟಿ ಮನಂಬಳ್ಳಿ, ಶ್ರೀನಿವಾಸ್ ನಡೂರ್, ಚಂದ್ರ ಆಚಾರ್ ಕೋಟ, ಸೀತರಾಮ್ ಜೋಗಿ, ದಾಮೋದರ ಜೋಗಿ, ರಾಜೇಶ್ ನೆಲ್ಲಿಬೆಟ್ಟು, ರವಿ ಕಾರ್ಕಡ, ಸ್ವಸ್ತಿಕ್ ಶೆಟ್ಟಿ, ಧನುಷ್ ಶೆಟ್ಟಿ, ಸಂಜಯ್, ಚಂದ್ರಕಾಂತ್, ಸುಮುಖ, ಗುರುವ ಹಾಲ್ಸ್ನಾಡ್, ಜೋನ್ಸನ್ ಸಾಸ್ತಾನ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಯಂಗ್ ಬಿ ಗ್ರೇಡ್ ಸೇವಾದಳ ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಗಣೇಶ್ ಕೆ ನೆಲ್ಲಿಬೆಟ್ಟು ನಿರೂಪಿಸಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಬಾಲಕೃಷ್ಣ ಪೂಜಾರಿ ಸಾಸ್ತಾನ ವಂದಿಸಿದರು.
ಮಣಿಪುರ ರಾಜ್ಯದ ನಾಗರಿಕರ ಪರವಾಗಿ ಮತ್ತು ಆಡಳಿತಾರೂಢ ರಾಜ್ಯ ಹಾಗೂ ಕೇಂದ್ರ ಬಿ.ಜೆ.ಪಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನಾ ಕಾರ್ಯಕ್ರಮವನ್ನು ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ, ಸಾಲಿಗ್ರಾಮ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ ಮಾತನಾಡಿದರು.
Leave a Reply