Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ಆಸಾಡಿ ಒಡ್ರ್ ಕ್ರೀಡಾಕೂಟ
ಗ್ರಾಮೀಣ ಕ್ರೀಡೆಗಳು ಮನೆ ಮನದಲ್ಲಿ ಸದಾ ಪಸರಿಸಬೇಕು- ಜಾನಕಿ ಹಂದೆ

ಕೋಟ: ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳು ಸದಾ ಜನಮನ ಹಾಗೂ ಮನೆಮನೆಯಲ್ಲೂ ಪಸರಿಸಬೇಕು ಆ ಮೂಲಕ ಅದರ ಮೌಲ್ಯಗಳು ಮುಂದಿನ ತಲೆಮಾರಿಗೆ ಕೊಂಡ್ಯೊಯುವ ಕಾರ್ಯಮಾಡುತ್ತಿರುವುದು ಸ್ವಾಗತಾರ್ಹ ಎಂದು ಸಹಕಾರಿ ಧುರೀಣೆ ಎಚ್ ಜಾನಕಿ ಹಂದೆ ಹೇಳಿದರು.

ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಸಾದರಪಡಿಸುವ ಆಸಾಡಿ ಒಡ್ರ್ ಗ್ರಾಮೀಣ ಸೊಗಡುಗಳ ತಿಲ್ಲಾನ ಅಗಸ್ಟ್ 6ರಂದು ಹಂದಟ್ಟು ಪರಿಸರದಲ್ಲಿ ನಡೆಯಲಿದ್ದು ಆ ಪ್ರಯುಕ್ತ ಭಾನುವಾರ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ಹಮ್ಮಿಕೊಂಡ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಪಂಚವರ್ಣ ಸಂಸ್ಥೆ ಸದಾ ಕ್ರಿಯಾಶೀಲತೆಯನ್ನು ಹೊಂದಿದೆ ಇಂಥಹ ಸಂಸ್ಥೆ ಸಾಮಾಜಮುಖಿ ಕಾರ್ಯ ಹಾಗೂ ಮಹಿಳೆಯರನ್ನು ಸ್ವಾವಲಂಬಿಯಾಗಿಸುವ ಮಹಿಳಾ ಮಂಡಲದ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದರು.
ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕೋಟ ಗ್ರಾಮಪಂಚಾಯತ್ ಸದಸ್ಯ ಎಂ.ಜಯರಾಮ ಶೆಟ್ಟಿ ,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಹಂದಟ್ಟು, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯರಾದ ಪ್ರಕಾಶ್ ಹಂದಟ್ಟು, ಪೂಜಾ ಪ್ರಸಾದ್ ಪೂಜಾರಿ, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಸುಜಾತ ಉದಯ್ ತಿಂಗಳಾಯ ಸ್ವಾಗತಿಸಿದರು. ಸದಸ್ಯೆ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಲಲಿತಾ ಪೂಜಾರಿ ವಂದಿಸಿದರು. ನಂತರ ಗ್ರಾಮೀಣ ಕ್ರೀಡಾಕೂಟ ಏರ್ಪಟ್ಟಿತು. ಕ್ರೀಡಾಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ವನೀತಾ ಉಪಾಧ್ಯ, ಶಕೀಲ, ವಸಂತಿ, ಸುಜಾತ ಬಾಯರಿ, ಅಜಿತ್ ಆಚಾರ್ ನಿರ್ವಹಿಸಿದರು. ಕಾರ್ಯಕ್ರಮವನ್ನು ಪಂಚವರ್ಣ ಸಂಸ್ಥೆಯ ಕಾಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಸಾದರಪಡಿಸುವ ಆಸಾಡಿ ಒಡ್ರ್ ಗ್ರಾಮೀಣ ಸೊಗಡುಗಳ ತಿಲ್ಲಾನ ಅಗಸ್ಟ್ 6ರಂದು ಹಂದಟ್ಟು ಪರಿಸರದಲ್ಲಿ ನಡೆಯಲಿದ್ದು ಆ ಪ್ರಯುಕ್ತ ಭಾನುವಾರ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ಹಮ್ಮಿಕೊಂಡ ಗ್ರಾಮೀಣ ಕ್ರೀಡಾಕೂಟವನ್ನು ಸಹಕಾರಿ ಧುರೀಣೆ ಎಚ್ ಜಾನಕಿ ಹಂದೆ ಉದ್ಘಾಟಿಸಿದರು. ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್, ಕೋಟ ಗ್ರಾಮಪಂಚಾಯತ್ ಸದಸ್ಯ ಎಂ.ಜಯರಾಮ ಶೆಟ್ಟಿ ,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಹಂದಟ್ಟು, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಇದ್ದರು.

Leave a Reply

Your email address will not be published. Required fields are marked *