
ಕೋಟ: ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ- ಆಪ್ ಸೊಸೈಟಿ ಶಿರೂರು ಮೂರ್ಕೈ ಇವರ ಆಶ್ರಯದಲ್ಲಿ ಕಾಮಧೇನು ವಿವಿಧೋದ್ದೇಶ ಸಹಕಾರಿ ಸಂಘ ಹಂದಟ್ಟು ಕೋಟ ಇವರ ಸಹಯೋಗದಲ್ಲಿ ಜು.29 ರಂದು ಶ್ರೀಮಲ್ಲಿಕಾರ್ಜುನ ಕ್ರೆಡಿಟ್ ಕೋ- ಆಪ್ ಸೊಸೈಟಿ ಶಿರೂರು ಮೂರ್ಕೈ ಇಲ್ಲಿನ ಮಲ್ಲಿಕಾರ್ಜುನ ಸೌಧದಲ್ಲಿ ಪರಿಣಾಮಕಾರಿ ವ್ಯಕ್ತಿತ್ವ ಹಾಗೂ ಭಾವೋತ್ಕರ್ಷ ವೃತ್ತಿಪರತೆ, ಸೇವಾ ಉತ್ಕೃಷ್ಟತೆ ಮತ್ತು ಒತ್ತಡ ನಿರ್ವಹಣೆ ಎಂಬ ವಿಷಯದ ಕುರಿತು ಸಹಕಾರಿ ಸಿಬ್ಬಂದಿಗಳ ತರಬೇತಿ ಕಾರ್ಯಗಾರ ನಡೆಯಿತು.
ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಮಂಜುನಾಥ್ ಎಸ್ ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಪ್ರೋ. ಮೇಜರ್ ರಾಧಾಕೃಷ್ಣ ಎಂ. ಮಾಸ್ಟರ್ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸಂಯುಕ್ತ ಸಹಕಾರಿಯ ಅಭಿವೃದ್ಧಿ ಅಧಿಕಾರಿ ವಿಜಯ್ , ಮಲ್ಲಿಕಾರ್ಜುನ ಕ್ರೆಡಿಟ್ ಕೋ- ಆಪ್ ಸೊಸೈಟಿಯ ಅಧ್ಯಕ್ಷ ಕೃಷ್ಣ ನಾಯ್ಕ್ ಉಪಸ್ಥಿತರಿದ್ದರು. ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ -ಆಪ್ ಸೊಸೈಟಿಯ ಸಿಇಓ ನರಸಿಂಹ ನಾಯಕ್ ಸ್ವಾಗತಿಸಿದರು. ಕಾಮಧೇನು ವಿವಿಧೋದ್ದೇಶ ಸಹಕಾರಿಯ , ಸಿಇಓ ಸತೀಶ್ ಕೆ ನಾಯ್ಕ್ ವಂದಿಸಿದರು. ಗಣೇಶ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ- ಆಪ್ ಸೊಸೈಟಿ ಶಿರೂರು ಮೂರ್ಕೈ ಇವರ ಆಶ್ರಯದಲ್ಲಿ ಕಾಮಧೇನು ವಿವಿಧೋದ್ದೇಶ ಸಹಕಾರಿ ಸಂಘ ಹಂದಟ್ಟು ಕೋಟ ಇವರ ಸಹಯೋಗದಲ್ಲಿಪರಿಣಾಮಕಾರಿ ವ್ಯಕ್ತಿತ್ವ ಹಾಗೂ ಭಾವೋತ್ಕರ್ಷ ವೃತ್ತಿಪರತೆ, ಸೇವಾ ಉತ್ಕೃಷ್ಟತೆ ಮತ್ತು ಒತ್ತಡ ನಿರ್ವಹಣೆ ಕಾರ್ಯಾಗಾರ ನಡೆಯಿತು.
Leave a Reply