
ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಜು.20ರಿಂದ ಪ್ರಾರಂಭವಾಗಿರುವ ಋಗ್ವೇದ ಕ್ರಮಪಾರಾಯಣವು ಜು. 29ರವರೆಗೆ ಸಂಪನ್ನಗೊಂಡಿತು.
10 ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ನಿರಂತರವಾಗಿ ನಡೆದ ಪಾರಾಯಣವನ್ನು ವೇ.ಮೂ. ಯಜ್ಞೇಶ್ವರ ಐತಾಳ ಮೈಸೂರು, ವೇ.ಮೂ. ಪ್ರದೀಪ ಭಟ್ಟ ಬೆಂಗಳೂರು, ವೆ. ಮೂ.ಸಂಜಯ ಕಾರಂತ ಕೋಟ, ವೇ. ಮೂ.ವಿವೇಕ ಭಟ್ಟ ಹರಿಹರಪುರ, ವೇ.ಮೂ.ವೆಂಕಟೇಶ್ ಪ್ರಸಾದ ಕಾಸರಗೋಡು, ಮತ್ತು ವೇ.ಮೂ.ಅನಿಲ್ ಹೊಳ್ಳ ಸಾಗರ, ಇವರು ಯಶಸ್ವಿಯಾಗಿ ನಡೆಸಿಕೊಟ್ಟರು. ಶ್ರೀ ದೇವರಿಗೆ ನವಕಪ್ರಧಾನ ಕಲಾಶಭಿಷೇಕ ಮಾಡುವುದರೊಂದಿಗೆ ಸಂಪನ್ನಗೊಳಿಸಲಾಯಿತು.

ಶ್ರೀದೇವಳದ ತಂತ್ರಿಗಳಾದ ವೇ. ಮೂ. ಕೃಷ್ಣ ಸೋಮಯಾಜಿ ಮತ್ತು ಅರ್ಚಕರಾದ ವೇ. ಮೂ. ಜನಾರ್ಧನ ಅಡಿಗ ಧಾರ್ಮಿಕ ವಿಧಿಗಳಲ್ಲಿ ಸಹಕರಿಸಿದರು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ ಎಸ್ ಕಾರಂತ ಉಪಾಧ್ಯಕ್ಷರಾದ ಕುಡಿನೆಲ್ಲಿ ವೇ.ಮೂ. ಗಣೇಶ ಮೂರ್ತಿ ನಾವಡ, ಕಾರ್ಯದರ್ಶಿ ಲಕ್ಷ್ಮಿನಾರಾಯಣ ತುಂಗ ಕೋಶಾಧಿಕಾರಿ ವೇ.ಮೂ.ಪರಶುರಾಮ ಭಟ್ಟ ಸದಸ್ಯರಾದ ಶ್ರೀಧರ್ ರಾವ್ ಕಾಸರಗೋಡು, ಸದಾಶಿವ ಐತಾಳ ಮಂಗಳೂರು, ಕೂ.ಮ.ಜ ಸಾಲಿಗ್ರಾಮ ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ ಹಂದೆ, ಸಾಲಿಗ್ರಾಮ ಮತ್ತು ವಿವಿಧ ಅಂಗಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಗ್ರಾಮ ಮೊಕ್ತೇಸರರು ಮತ್ತಿತರು ಉಪಸ್ಥಿತರಿದ್ದರು
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಜು.20ರಿಂದ ಪ್ರಾರಂಭವಾಗಿರುವ ಋಗ್ವೇದ ಕ್ರಮಪಾರಾಯಣವು ಜು. 29ರವರೆಗೆ ಸಂಪನ್ನಗೊಂಡಿತು. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ ಎಸ್ ಕಾರಂತ ಉಪಾಧ್ಯಕ್ಷರಾದ ಕುಡಿನೆಲ್ಲಿ ವೇ.ಮೂ. ಗಣೇಶ ಮೂರ್ತಿ ನಾವಡ, ಕಾರ್ಯದರ್ಶಿ ಲಕ್ಷ್ಮಿನಾರಾಯಣ ತುಂಗ ಮತ್ತಿತರರು ಇದ್ದರು.
Leave a Reply