Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟೇಶ್ವರದಲ್ಲಿ ಜಿ.ಎಸ್.ಬಿ. ಚೆಸ್ ಪಂದ್ಯಾಕೂಟ ಉದ್ಘಾಟನೆ

ಕೊಂಕಣ್ ಸ್ಪೋರ್ಟ್ಸ್ ಹಾಗೂ ಕಲ್ಚರಲ್‌ ಅಸೋಸಿಯೇಷನ್(ರಿ) ಕೋಟೇಶ್ವರ ಮತ್ತು ಶ್ರೀ ರಾಮ‌ ಸೇವಾ ಸಂಘ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್‌ರವರ ಸಹಯೋಗದೊಂದಿಗೆ ಗೌಡ ಸಾರಸ್ವತ ಸಮಾಜ (ಜಿ.ಎಸ್.ಬಿ) ಬಾಂಧವರಿಗೆ ಕರ್ನಾಟಕ ರಾಜ್ಯ ಮಟ್ಟದ ಮುಕ್ತ ರಾಪಿಡ್ ಚೆಸ್ ಪಂದ್ಯಕೂಟ *ಕೊಂಕಣ್ ಟ್ರೋಫಿ-2023* ಜುಲೈ 30 ರಂದು ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ಕಲ್ಯಾಣ ಮಂದಿರದಲ್ಲಿ ಆರಂಭಗೊಂಡಿತು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಆತಿಥಿಯಾಗಿ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀಧರ ವಿಠ್ಠಲ ಕಾಮತ್ ಸಾಂಕೇತಿಕವಾಗಿ ಚಸ್ ದಾಳವನ್ನು ಆಡುವುದರ ಮೂಲಕ ಚಾಲನೆ ನೀಡಿದರು ನಂತರ ಮಾತನಾಡುತ್ತಾ ಚೆಸ್ ಆಡುವುದರಿಂದ ಬುದ್ದಿ ಚುರುಕುಗೊಂಡು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಲಿದೆ. ಹಿಂದಿನ ಕಾಲದಲ್ಲಿ ಇಂತಹ ಆಟಗಳಿಗೆ ಹೆಚ್ಚಿನ ಅವಕಾಶವಿರಲಿಲ್ಲ. ಇಂದು ಚೆಸ್ ಆಟಕ್ಕೆ ತರಬೇತಿ ಸಿಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಇನ್ನೋರ್ವ ಮುಖ್ಯ ಅತಿಥಿ ಶ್ರೀ ರಾಮ ಸೇವಾ ಸಂಘದ ಅಧ್ಯಕ್ಷ‌ ಶಂಕರ ಕಾಮತ್ ಮಾತುನಾಡುತ್ತಾ,‌ಸಂಘವು ವತಿಯಿಂದ ಹಲವು ವರ್ಷಗಳಿಂದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ‌ ಹಲವು ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ. ಇಂದು ನಡೆದ ಚೆಸ್ ಪಂದ್ಯಕೂಟದಿಂದ ಪರಿಸರದ ಸಮಾಜದಲ್ಲಿ ಉತ್ತಮ ಅನ್ಯೋನ್ಯತೆ ಬೆಳೆಯಲಿ ಎಂದು ಶುಭಹಾರೈಸಿದರು.

ಶ್ರೀ ರಾಮ ದೇವಾ ಮಹಿಳಾ ಮಂಡಳಿಯ ಅಧ್ಯಕ್ಷೆ ರಮ್ಯಾ ಪೈ, ಕೊಂಕಣ್ ಸ್ಪೋರ್ಟ್ಸ್ ಹಾಗೂ ಕಲ್ಚರಲ್‌ ಅಸೋಸಿಯೇಷನ್ (ರಿ) ಪುರುಷೋತ್ತಮ ಕಾಮತ್ ಉಪಸ್ಥಿತರಿದ್ದರು. ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಹಾಗೂ ಮಂಗಳೂರಿನ ಸುಮಾರು 110 ಸ್ಪರ್ಧಾಳುಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸಿದರು. ದೀಪಾ ಕಿಣಿ ಮತ್ತು ಪದ್ಮಾವತಿ ಭಟ್ ಪ್ರಾರ್ಥಿಸಿದರು. ನರೇಶ ಭಟ್ ಕಾರ್ಯಕ್ರಮವನ್ನು ನಿರ್ವಹಿಸಿ, ಪ್ರಸ್ಥಾವನೆಗೈದು ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *