
ಬ್ರಹ್ಮ ಬೈದರ್ಕಳ ನಗರ ಬಡಾವಣೆ ನಿವಾಸಿಗಳ ಸಂಘ ಮಹಾಸಭೆ ಜುಲೈ 23 ರಂದು ಫ್ರೀ ವೀರಭದ್ರ ಕಲಾ ಭವನ, ಕಿನ್ನಿ ಮುಲ್ಕಿ ಇಲ್ಲಿ ಜರಗಿತು. ಶ್ರೀಮತಿ ಅಮೃತ ಕೃಷ್ಣಮೂರ್ತಿ ಆಚಾರ್ಯ ಸದಸ್ಯರು , ಉಡುಪಿ ನಗರಸಭೆ ಇವರು ಅಧ್ಯಕ್ಷತೆ ವಹಿಸಿ ಬಡಾವಣೆಯನ್ನು ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸರಕಾರದ ಅನುದಾನದಿಂದ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಬಡಾವಣೆಯ ನಿವಾಸಿಗಳಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅನಾರೋಗ್ಯದಿಂದ ಆರ್ಥಿಕ ಸಂಕಷ್ಟದಲ್ಲಿರುವ ಬಡಾವಣೆಯ ನಿವಾಸಿಗೆ ಸಂಘದ ವತಿಯಿಂದ ಸಹಾಯಧನ ವಿತರಿಸಲಾಯಿತು. ಅಧ್ಯಕ್ಷರಾದ ಶ್ರೀ ವಿಜಯ್ ಕುಮಾರ್ ಇವರು ಸ್ವಾಗತಿಸಿದರು. ಸಂಘದ ಜೊತೆ ಕಾರ್ಯದರ್ಶಿ ಆಗಿರುವ ಶ್ರೀಮತಿ ಪುಷ್ಪಲತಾ ತಂತ್ರಿ ಯವರು ವರದಿ ವಾಚಿಸಿದರು. ಕೋಶಾಧಿಕಾರಿ ಶ್ರೀ ಗುಣ ಪಾಲ್ ಇವರು ಲೆಕ್ಕಪತ್ರ ಮಂಡಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಶಿವಶಂಕರ್ ಯು ಇವರು ವಂದಿಸಿದರು.
2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸುಧೀರ್ ಕುಮಾರ್ ರವರು ಆಯ್ಕೆಯಾದರು. ನಂತರ ಸದಸ್ಯರಿಗೆ ವಿವಿಧ ಸ್ಪರ್ಧೆ ಜರಗಿಸಿ ಬಹುಮಾನ ವಿತರಿಸಲಾಯಿತು. ಶ್ರೀಮತಿ ಪುಷ್ಪಲತಾ ರಂಜನ್ ಅವರು ಕಾರ್ಯಕ್ರಮ ನಿರೂಪಿಸಿದರು.
Leave a Reply