ನೆಲಮಂಗಲ-ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಈಗ ನಿರ್ದೋಷಿ ಎಂದು ಬಿಡುಗಡೆಯಾಗಿರುವ ವ್ಯಕ್ತಿ ಸಂತೋಷ ಆರೋಪಿ ಅಥವಾ ಅಪರಾಧಿ ಅಲ್ಲ ಎಂದ ಮೇಲೆ ನಿಜವಾದ ಆರೋಪಿ ಅಥವಾ ಅಪರಾಧಿಯನ್ನು ಬಂಧಿಸುವಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಿಫಲವಾಗಿದೆ ಅಥವಾ ಪಟ್ಟ ಭದ್ರ ಹಿತಾಸಕ್ತಿಗಳಿಗೆ /ಬಲಾಢ್ಯರಿಗೆ ಮಾರಾಟವಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ, ಆಗಾದರೆ ಅಂದು ಆತನನ್ನು ಆ ಪೊಲೀಸ್ ನವರು ಏಕೆ ಬಂಧಿಸಿದರು? ಇವರ ಈ ರೀತಿಯ ನಡವಳಿಕೆಯನ್ನು ನೋಡಿದರೆ ಇವರೇ ಏಕೆ ಆರೋಪಿನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಿ ಬೇರೆ ಯಾರನ್ನೋ ಏಕೆ ಬಂಧಿಸಿರಬಾರದು, ಈ ರೀತಿಯ ಕರ್ತವ್ಯ ಲೋಪ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಮತ್ತು ಈ ಕೂಡಲೇ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಈ ಸದರಿ ಪ್ರಕರಣಕ್ಕೆ ಮರು ತನಿಖೆ ಮಾಡುವಂತೆ ಆದೇಶಿಸುವಂತೆ ನಮ್ಮ ಕರ್ನಾಟಕ ರಣಧೀರರ ವೇದಿಕೆಯು ಒತ್ತಾಯಿಸುತ್ತದೆ. ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಪೊಲೀಸ್ ಇಲಾಖೆ ಸೂಕ್ತ ಮರು ತನಿಖೆ ಮಾಡಿ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿಲ್ಲ ಎಂದರೆ ಮುಂದಿನ ದಿನಗಳಲ್ಲಿ ರಾಜ್ಯಾಧ್ಯಂತ ಬೃಹತ್ ಮಟ್ಟದ ಹೋರಾಟ ಮಾಡಲಾಗುತ್ತದೆ ಎಂದು ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು.ಕೆ.ಆರ್. ರವರು ತಿಳಿಸಿದ್ದಾರೆ.
ಸೌಜನ್ಯ ಗೌಡ ಅತ್ಯಾಚಾರ ಕೊಲೆ ಪ್ರಕರಣ ಕೂಡಲೇ ಮರು ತನಿಖೆಗೆ ಸರ್ಕಾರ ಆದೇಶಿಸಬೇಕು- ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು.ಕೆ.ಆರ್.
















Leave a Reply