Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಸ್ತಾನ ಸಿ.ಎ ಬ್ಯಾಂಕ್ ಚುನಾವಣೆ ಕಾಂಗ್ರೆಸ್ ,ಬಿಜೆಪಿ ಸಮಬಲ; ಪಕ್ಷೇತರ ಅಭ್ಯರ್ಥಿ ನಿರ್ಣಾಯಕ

ಕೋಟ : ಸಾಸ್ತಾನ ಸಹಕಾರಿ ವ್ಯಾವಸಾಯಿಕ ಸಂಘದ ಆಡಳಿತ ಮಂಡಳಿಯ 13 ಸ್ಥಾನಗಳಲ್ಲಿ 12 ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 6, ಕಾಂಗ್ರೆಸ್ ಬೆಂಬಲಿತ 5, ಒಬ್ಬ ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದು, ಎಸ್ಟಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತರು ಸಮಬಲ ಪಡೆದುಕೊಂಡಿದ್ದಾರೆ.

ಪಾಂಡೇಶ್ವರ ಸಾಮಾನ್ಯ ಕ್ಷೇತ್ರದಿಂದ ಚಂದ್ರಮೋಹನ್, ಶ್ರೀಧರ ಪಿ. ಎಸ್., ಐರೋಡಿ ಸಾಮಾನ್ಯ ಕ್ಷೇತ್ರದಿಂದ ಆನಂದ ಗಾಣಿಗ, ಎ. ರಮೇಶ್ ಕಾರಂತ, ಮೂಡುಹಡು ಸಾಮಾನ್ಯ ಕ್ಷೇತ್ರದಿಂದ ವಿಜಯ ಪೂಜಾರಿ, ಅರುಣ ಪೂಜಾರಿ ವೈ., ಬಾಳೆಕುದ್ರು ಸಾಮಾನ್ಯ ಕ್ಷೇತ್ರದಿಂದ ಸುರೇಶ್ ಅಡಿಗ, ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಗೋವಿಂದ ಪೂಜಾರಿ, ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಕಿರಣ್ ಥಾಮಸ್ ಡಾಯಸ್, ಮಹಿಳಾ ಮೀಸಲು ಕ್ಷೇತ್ರದಿಂದ ಲೀಲಾವತಿ ಗಂಗಾಧರ ಪೂಜಾರಿ, ಕಮಲ ಆಚಾರ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ದಿಂದ ಶೇಖರ ಗದ್ದೆಮನೆ ಜಯ ಗಳಿಸಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಪ್ರೀತಿ ಅವಿರೋಧ ಆಯ್ಕೆಗೊಂಡಿದ್ದಾರೆ.

ಬಿಜೆಪಿ ಬೆಂಬಲಿತರಾಗಿ ಎ.ರಮೇಶ್ ಕಾರಂತ, ವಿಜಯ್ ಪೂಜಾರಿ, ಅರುಣ ಪೂಜಾರಿ ವೈ., ಗೋವಿಂದ ಪೂಜಾರಿ, ಕಿರಣ್ ಥೋಮಸ್ ಡಾಯಸ್, ಶೇಖರ ಗದ್ದಮನೆ, ಕಾಂಗ್ರೆಸ್ ಬೆಂಬಲಿತರಾಗಿ ಚಂದ್ರ ಮೋಹನ್, ಶ್ರೀಧರ ಪಿ.ಎಸ್., ಆನಂದ ಗಾಣಿಗ, ಲೀಲಾವತಿ ಗಂಗಾಧರ್, ಕಮಲ ಆಚಾರ್, ಪ್ರೀತಿ, ಪಕ್ಷೇತರರಾಗಿ ಸುರೇಶ್ ಅಡಿಗ ಆಯ್ಕೆಗೊಂಡಿದ್ದಾರೆ.

ಪಕ್ಷೇತರ ಅಭ್ಯರ್ಥಿ ನಿರ್ಣಾಯಕ
ಬಾಳೆಕುದ್ರು ಸಾಮಾನ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ ಸುರೇಶ್ ಅಡಿಗ ಸಮಬಲದ ಹೊಂದಿದ ಎರಡು ಪಕ್ಷಗಳಿಗೆ ನಿರ್ಣಾಯಕರಾಗಿದ್ದಾರೆ, ಇತ್ತ ಬಿಜೆಪಿ ಪಕ್ಷೇತರ ಸುರೇಶ್ ಅಡಿಗರ ಎದುರು ತನ್ನ ಸ್ಪರ್ಧಿ ನಿಲ್ಲಿಸದೆ ಬೆಂಬಲ ಫೋಷಿಸಿ ಜಯಗಳಿಸಲು ಸಹಕಾರಿಯಾಗಿದೆ ಎನ್ನಲಾಗಿದೆ. ಆದ್ದರಿಂದ ಬಿಜೆಪಿ ಅಡಿಗ ಬೆಂಬಲ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *