Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಗುಂಡ್ಮಿ ಸರಕಾರಿ ಪ್ರೌಢ ಶಾಲೆ ವಿವಿಧ ಕ್ಲಬ್‍ಗಳ ಉದ್ಘಾಟನೆ

ಕೋಟ: ಸರಕಾರಿ ಪ್ರೌಢ ಶಾಲೆ ಗುಂಡ್ಮಿ ಸಾಸ್ತಾನ ಇಲ್ಲಿ ಈ ಶೈಕ್ಷಣಿಕ ವರ್ಷದ ಶಾಲಾ ವಿವಿಧ ಕ್ಲಬ್‍ಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚಿಗೆ ನೆರವೇರಿತು. ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಸುಲತಾ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್‍ನ ಅಧ್ಯಕ್ಷ ಅರವಿಂದ ಶರ್ಮ ಶಾಲಾ ಇಂಟರ್ಯಾಕ್ಟ್ ಕ್ಲಬ್‍ನ ಪದಗ್ರಹಣ ನೆರವೇರಿಸಿದರು. ಕಾರ್ಯದರ್ಶಿ ಕರುಣಾಕರ ಶೆಟ್ಟಿ, ಮಾಜಿ ಅಧ್ಯಕ್ಷರಾದ ಚಂದ್ರ ನಾಯರಿ, ಮನೋಜ್ ಕುಮಾರ್,ಇಂಟರ್ಯಾಕ್ಟ್ ಚೇರ್ಮೆನ್ ಬಾಲಕೃಷ್ಣ ಪೂಜಾರಿ , ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ಶಿಕ್ಷಕರಾದ ಉದಯ್ ಕೋಟ, ಪ್ರೇರಣ ಜಿಲ್ಲಾ ನೋಡೆಲ್ ಆಶಾ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ರಾಘವೇಂದ್ರ ಶೇರ್ವೆಗಾರ್, ಶಿಕ್ಷಣ ತಜ್ಞರಾದ ಗಣೇಶ ಚೆಲ್ಲಮಕ್ಕಿ, ಶಾಲಾ ಇಂಟರ್ಯಾಕ್ಟ್ ಅಧ್ಯಕ್ಷೆ ಇಂ, ಪೃಥ್ವಿ, ಕಾರ್ಯದರ್ಶಿ ಇಂದುಶ್ರೀ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಸತೀಶ ಐತಾಳ್ ಸರ್ವರನ್ನು ಸ್ವಾಗತಿಸಿದರು, ಸತೀಶ್ಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿ, ಮೇಘ ಪಿ.ಜಿ .ಧನ್ಯವಾದ ಸಮರ್ಪಿಸಿದರು. ಹೆಲೆನ್ ಬಾಂಜ್ ಕಾರ್ಯಕ್ರಮ ನಿರೂಪಿಸಿದರು.

ಸರಕಾರಿ ಪ್ರೌಢ ಶಾಲೆ ಗುಂಡ್ಮಿ ಸಾಸ್ತಾನ ಇಲ್ಲಿ ಈ ಶೈಕ್ಷಣಿಕ ವರ್ಷದ ಶಾಲಾ ವಿವಿಧ ಕ್ಲಬ್‍ಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚಿಗೆ ನೆರವೇರಿತು.

Leave a Reply

Your email address will not be published. Required fields are marked *