
ಕೋಟ: ಜೆಸಿಐ ಇಂಡಿಯಾ ವಲಯ 15ರ ಬೆಳವಣಿಗೆ ಮತ್ತು ಅಭಿವೃದ್ಧಿ ಹಾಗೂ ವ್ಯವಹಾರ ಸಮ್ಮೇಳನ ವೃದ್ಧಿ ಜೂನ್ 23 ರಂದು ಜೆಸಿಐ ಶಂಕರನಾರಾಯಣ ಆತಿಥ್ಯದಲ್ಲಿ ಹಾಲಾಡಿಯ ಶಾಲಿನಿ ಜಿ. ಶಂಕರ್ ಕನ್ವೆನ್ಷನ್ ಸೆಂಟರ್ ನಲ್ಲಿ ಜೆಸಿಐ ಕೋಟ ಬ್ರಿಗೇಡಿಯರ್‍ನ ಸ್ಥಾಪಕಾಧ್ಯಕ್ಷರಾದ ಹಲವಾರು ಸಮಾಜಮುಖಿ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುರೇಶ್ ಗಿಳಿಯಾರು ಇವರಿಗೆ ಜೇಸಿ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಲಯಾಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ನಿಕಟ ಪೂರ್ವ ವಲಯಾಧ್ಯಕ್ಷರಾದ ರಾಯನ್ ಉದಯ ಕ್ರಾಸ್ತ, ವಲಯ ಉಪಾಧ್ಯಕ್ಷರಾದ ಅಭಿಲಾಷ್, ನಿರ್ದೇಶಕರಾದ ಅಕ್ಷತಾ ಗಿರೀಶ್, ಜೇಸಿ ಮರಿಯಪ್ಪ, ನಾಗರಾಜ್, ಜೆಸಿಐ ಕೋಟ ಬ್ರಿಗೇಡಿಯರ್‍ನ ಸ್ಥಾಪಕರಾದ ಕೇಶವ ಆಚಾರ್ ಕೋಟ ಹಾಗೂ ಸದಸ್ಯ ಸುಭಾಷ್ ಉಪಸ್ಥಿತರಿದ್ದರು.