• Fri. May 9th, 2025

News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ.....

ಅವಿದ್ಯೆಯಿಂದ ವಿದ್ಯೆಯನ್ನೂ ಸಾಧಿಸುವುದಕ್ಕಾಗುತ್ತದೆ: ಹಳ್ಳಾಡಿ ಮಂಜುನಾಥ ಕೆದ್ಲಾಯ

ByKiran Poojary

Jul 31, 2023

ಕೋಟ: ವಿದ್ಯೆಯನ್ನು ಶಾಸ್ತ್ರದಲ್ಲಿ ವಿದ್ಯಾ ಮತ್ತು ಅವಿದ್ಯಾ ಎಂದು ಎರಡು ವಿಭಾಗ ಮಾಡಿದ್ದಾರೆ. ಜನ್ಮದಿಂದ ಜೀವನದ ಮುಕ್ತಾಯದವರೆಗೆ ಬೇಕಾದಂತಹ ಎಲ್ಲ ಜೀವನೋಪಾಯಗಳನ್ನು ಒದಗಿಸತಕ್ಕಂತಹ ಐಹಿಕ ಜೀವನಕ್ಕೆ ಬೇಕಾದಂತಹ ಸಂಪತ್ತು ವಿದ್ಯೆ ಅವಿದ್ಯ. ಜೊತೆಗೆ ವಿದ್ಯೆ ಕೂಡ ಅಷ್ಟೇ ಅಗತ್ಯ. ಮನುಷ್ಯರಾಗಿ ಹುಟ್ಟಿದ ಮೇಲೆ ಇಹ ಮತ್ತು ಪರ, ವಿದ್ಯೆ ಮತ್ತು ಅವಿದ್ಯೆ ಎರಡೂ ಸಂಸ್ಕಾರ ರೂಪಿಸುತ್ತದೆ. ಅದಕ್ಕಾಗಿಯೇ ನಮ್ಮಲ್ಲಿ ಮೂಲಭೂತವಾದ ಉದ್ದೇಶ, ಮಕ್ಕಳನ್ನು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಹದ್ದು. ಬೇರೆ ಬೇರೆ ಚಟುವಟಿಕೆಗಳಿಂದ ಸಂಸ್ಕಾರ ಹೆಚ್ಚುತ್ತದೆ. ಅದರಿಂದ ವಿದ್ಯೆ ಹುಟ್ಟಿಕೊಳ್ಳುತ್ತದೆ. ಹೀಗೆ ವಿದ್ಯೆ ಹುಟ್ಟಿಕೊಂಡಾಗ ಅವಿದ್ಯೆಯ ಬಗ್ಗೆಯೂ ಶೃದ್ಧೆ ಇರುತ್ತದೆ. ಅವಿದ್ಯೆಯಿಂದ ವಿದ್ಯೆಯನ್ನೂ ಸಾಧಿಸುವುದಕ್ಕಾಗುತ್ತದೆ. ವಿನಯಗುಣ ಸಂಪನ್ನೆಯಾದ ಕು| ಪ್ರಣಮ್ಯ ಜಿ. ಹೆಚ್. ಅವರನ್ನು ಅಭಿವಂದಿಸಿ ಮಂಜುನಾಥ ಕೆದಲಾಯ ಹಳ್ಳಾಡಿ ಮಾತನ್ನಾಡಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇವರ ಆಶ್ರಯದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿಯಾಗಿ ಆಯ್ಕೆಯಾದ ಪ್ರಣಮ್ಯ ಜಿ. ಹೆಚ್.ರವರ ಅಭಿನಂದನ ಕಾರ್ಯಕ್ರಮದಲ್ಲಿ ಮಂಜುನಾಥ ಕೆದಲಾಯ ಮಾತನ್ನಾಡಿದರು. ತೆಕ್ಕಟ್ಟೆ ಕಲಾ ಕೇಂದ್ರದಲ್ಲಿ ಹತ್ತು ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಂದ್ರಕ್ಕೆ ಹೆಸರು ತಂದ ಪ್ರಣಮ್ಯ ವಿದ್ಯಾಭ್ಯಾಸದಲ್ಲೂ ಅಪೂರ್ವವಾದ ಸಾಧನೆ ಗೈದಿರುವಳು. ಸಾಧನೆಯು ಸಾಧಕನ ಸೊತ್ತೇ ಹೊರತು ಸೋಮಾರಿಯ ಸೊತ್ತಲ್ಲ. ಸಾಧಿಸುವ ಛಲ ಇದ್ದರೆ ಏನನ್ನೂ ಸಾಧಿಸಬಹುದು ಎನ್ನುವುದನ್ನು ತೋರಿಸಿದವಳು ಪ್ರಣಮ್ಯ. ಊರಿನ ಕಣ್ಮಣಿಯಾದಂತಹ ದೇಶದ ಬೆನ್ನೆಲುಬಾಗಲಿ ಎಂದು ಹಾರೈಸಿ ಗುರುಗಳಾದ ಸೀತಾರಾಮ ಶೆಟ್ಟಿ ಕೊೈಕೂರು ಮಾತನ್ನಾಡಿದರು.

ಅಭ್ಯಾಗತರಾಗಿ ತೆಕ್ಕಟ್ಟೆ ರೋಟರಿ ಕ್ಲಬ್‍ನ ಅಧ್ಯಕ್ಷ ಸುಧಾಕರ ಶೆಟ್ಟಿ ತೆಕ್ಕಟ್ಟೆ, ಕೊಮೆ, ಕೊರವಡಿ ವಿವಿದೋದ್ಧೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ ಕೊಮೆ, ಕಾರ್ಯದರ್ಶಿ ವೆಂಕಟೇಶ ವೈದ್ಯ, ಉಪಸ್ಥಿತರಿದ್ದರು. ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕು.ಹರ್ಷಿತಾ, ಮಾ.ಕಿಶನ್ ಪ್ರಾರ್ಥನೆಗೈದು, ಗಣೇಶ್ ಕೊಮೆ ಸ್ವಾಗತಿಸಿ, ಪ್ರಭಾಕರ ಮಣೂರು ಪಡುಕೆರೆ ಧನ್ಯವಾದಗೈದರು. ಮಾ.ಪವನ್ ನಿರೂಪಣೆ ಗೈದರು. ಬಳಿಕ ಯಶಸ್ವೀ ಕಲಾಕೇಂದ್ರದ ಶಿಷ್ಯರಿಂದ ‘ಶುಭಾಶಯ ಯಕ್ಷ ಗಾಯನ’ ರಂಗದಲ್ಲಿ ಪ್ರಸ್ತುತಿಗೊಂಡುತು.

ತೆಕ್ಕಟ್ಟೆ ಹಯಗ್ರೀವದಲ್ಲಿ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇವರ ಆಶ್ರಯದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿಯಾಗಿ ಆಯ್ಕೆಯಾದ ಪ್ರಣಮ್ಯ ಜಿ. ಹೆಚ್.ರವರ ಅಭಿನಂದಿಸಲಾಯಿತು.

Leave a Reply

Your email address will not be published. Required fields are marked *