Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ ದಂತ ವೈದ್ಯಕೀಯ ಸಂಘದಿಂದ ರಾಜ್ಯಮಟ್ಟದ ಕಾರ್ಯಗಾರ

ಉಡುಪಿ : ಕಸ್ತೂರ್ಬಾ ಆಸ್ಪತ್ರೆ ಸಮೂಹ ಮಣಿಪಾಲ ಹಾಗೂ ಉಡುಪಿ ಜಿಲ್ಲಾ ಭಾರತೀಯ ದಂತ ವೈದ್ಯಕೀಯ ಸಂಫ ಜಂಟಿ ಆಶ್ರಯದಲ್ಲಿ ಸ್ಥಳೀಯ ಓಷನ್ ಪರ್ಲ್ ಹೋಟೆಲ್‌ನ ಲ್ಲಿ ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯದ ಡೀನ್‌ ಡಾll ಮೋನಿಕಾ ಸೋಲೋಮೋನ್ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಸಂಘದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿ ಶುಭಹಾರೈಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾll ಶ್ರೀಕಾಂತ್ ಹಾಗೂ ಡಾll ಆದರ್ಶ್ ಕುಡ್ವ ಭಾಗವಹಿಸಿ ದಂತ ಚಿಕಿತ್ಸ್ಯೆಯಲ್ಲಿ ಎದುರಾಗುವ ಸವಾಲುಗಳು ಮತ್ತು ಆಧುನಿಕ ಚಿಕಿತ್ಸ್ಯೆ ವಿಧಾನಗಳ ಬಗ್ಗೆ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು.

ಕಸ್ತೂರ್ಬಾ ಆಸ್ಪತ್ರೆಗಳ ಮಾರುಕಟ್ಟೆ ವಿಭಾಗದ ಮುಖ್ಯಸ್ಥಾರಾದ ಶ್ರೀ ಸಚಿನ್ ಕಾರಂತ್ ಹಾಗೂ ಸಂಘದ ಪೂರ್ವಧ್ಯಕ್ಷಗಳಾದ ಡಾ.ವಿಜಯೇಂದ್ರ ರಾವ್, ಡಾ.ಗುರುರಾಜ್, ಡಾ.ಮನೋಜ್ ಮ್ಯಾಕ್ಸಿಮ್ ಡಿಲೀಮ್, ಡಾ.ಗಣೇಶ್ ಕಾಮತ್, ಡಾ. ಪ್ರಮೋದ್ ಶೆಟ್ಟಿ , ಕಾರ್ಯಗಾರ ಸಂಯೋಜಕ ಡಾ. ಬೀಸು ನೈಕ ಉಪಸ್ಥಿತರಾಗಿದ್ದರು.

ಉಡುಪಿ ಜಿಲ್ಲಾ ಭಾರತೀಯ ದಂತ ವೈದ್ಯಕೀಯ ಸಂಫದ ಅಧ್ಯಕ್ಷರಾ ಡಾ ll ಸತೀಶ್ ಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ಡಾ ll ಜಗದೀಶ್ ಜೋಗಿ ವಂದಿಸಿದರು.

Leave a Reply

Your email address will not be published. Required fields are marked *