
ಕೋಟ: ರೋಟರಿ ಕ್ಲಬ್ ಕೋಟ ಸಿಟಿ ವತಿಯಿಂದ ಕೋಟತಟ್ಟು ಕಲ್ಮಾಡಿ ಅಂಗನವಾಡಿ ಇಲ್ಲಿನ ಪುಟಾಣಿಗಳಿಗೆ ಸಮವಸ್ತ್ರ ಹಾಗೂ ಸ್ಕೂಲ್ ಬ್ಯಾಗ್ಗಳನ್ನು ಮಂಗಳವಾರ ಕೊಡುಗೆಯಾಗಿ ನೀಡಿದರು. ಸ್ಕೂಲ್ ಬ್ಯಾಗ್ ವಿತರಿಸಿ ಮಾತನಾಡಿದ ರೋಟರಿ ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ ಮೆಂಡನ್ ರೋಟರಿ ಕ್ಲಬ್ ಕಳೆದ ಸಾಕಷ್ಟು ವರ್ಷಗಳಿಂದ ಸಾಮಾಜಿಕ ,ಶೈಕ್ಷಣಿಕ ಇನ್ನಿತರ ಕ್ಷೇತ್ರಗಳಿಗೆ ತನ್ನದೆ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ.ಅಂತಯೇ ರೋಟರಿ ಕೋಟ ಸಿಟಿ ಸ್ಥಳೀಯವಾಗಿ ಸಾಕಷ್ಟು ಸೇವೆಗಳನ್ನು ನೀಡುತ್ತಿದೆ ಇದು ಶ್ಲಾಘನೀಯ ಕಾರ್ಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯೆ ಸರಸ್ವತಿ,ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷ ವೆಂಕಟೇಶ ಆಚಾರ್, ಕಾರ್ಯದರ್ಶಿ ಸತೀಶ್ ಪೂಜಾರಿ, ಮಾಜಿ ಅಧ್ಯಕ್ಷ ಎಂ ಸುಬ್ರಾಯ ಆಚಾರ್, ದಯಾನಂದ ಆಚಾರ್, ರೋಟರಿ ಪದಾಧಿಕಾರಿಗಳಾದ ನಾಗರಾಜ್ ಆಚಾರ್, ನಿತ್ಯಾನಂದ ಆಚಾರ್, ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ವನಜ, ಆಶಾಕಾರ್ಯಕರ್ತೆ ಮಲ್ಲಿಕಾ, ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ , ಸಹಾಯಕಿ ಶೈಲಜಾ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಕೋಟ ಸಿಟಿ ವತಿಯಿಂದ ಕೋಟತಟ್ಟು ಕಲ್ಮಾಡಿ ಅಂಗನವಾಡಿ ಇಲ್ಲಿನ ಪುಟಾಣಿಗಳಿಗೆ ಸಮವಸ್ತ್ರ ಹಾಗೂ ಸ್ಕೂಲ್ ಬ್ಯಾಗ್ಗಳನ್ನು ಮಂಗಳವಾರ ಕೊಡುಗೆಯಾಗಿ ನೀಡಿದರು.














Leave a Reply