Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರೋಟರಿ ಕ್ಲಬ್ ಹಂಗಾರ ಕಟ್ಟೆ ಸಾಸ್ತಾನ ವತಿಯಿಂದ ಬಾಳುಕುದ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯ ಕೊಡುಗೆ

ಕೋಟ: ರೋಟರಿ ಕ್ಲಬ್ ಹಂಗಾರ ಕಟ್ಟೆ ಸಾಸ್ತಾನ ವತಿಯಿಂದ ಬಾಳುಕುದ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಶೌಚಾಲಯದ ದುಷ್ಥಿತಿಯನ್ನು ಕಂಡು ಅದನ್ನು ಪರಿಶೀಲಿಸಿ ಡಿಸ್ಟ್ರಿಕ್ಟ್ ಪ್ರಾಜೆಕ್ಟ್‍ನ ಸಹಾಯವನ್ನು ಪಡೆದು ಶೌಚಾಲಯವನ್ನು ಆಧುನಿಕ ಸೌಲಭ್ಯಗಳೊಂದಿಗೆ ಇತ್ತೀಚಿಗೆ ನವೀಕರಿಸಿತು.

ಈ ನವೀಕೃತ ಶೌಚಾಲಯನ್ನು ರೋಟರಿ ಜಿಲ್ಲಾ ಗವರ್ನರ್ ಬಿ.ರಾಜಾರಾಮ್ ಭಟ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಹಂಗಾರ ಕಟ್ಟೆ ಸಾಸ್ತಾನ ನಿಕಟಪೂರ್ವ ಅಧ್ಯಕ್ಷ ಮನೋಜ್ ಕುಮಾರ್, ಕಾರ್ಯದರ್ಶಿ ಬಾಲಕೃಷ್ಣ ಪಿ ಪೂಜಾರಿ, ಲಿಟ್ರೇಸಿ ಚೇರ್ ಮ್ಯಾನ್ ಗಣೇಶ್.ಜಿ ರೋಟರಿ ಪದಾಧಿಕಾರಿಗಳಾದ ಅರವಿಂದ್ ಶರ್ಮಾ , ಕರುಣಾಕರ ಶೆಟ್ಟಿ ಹಾಗೂ ಕುಸುಮ ಮನೋಜ್ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಹಂಗಾರ ಕಟ್ಟೆ ಸಾಸ್ತಾನ ವತಿಯಿಂದ ಬಾಳುಕುದ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನವೀಕೃತ ಶೌಚಾಲಯನ್ನು ರೋಟರಿ ಜಿಲ್ಲಾ ಗವರ್ನರ್ ಬಿ.ರಾಜಾರಾಮ್ ಭಟ್ ಉದ್ಘಾಟಿಸಿದರು.

Leave a Reply

Your email address will not be published. Required fields are marked *