
ಕೋಟ: ಜೇಸಿಐ ಕಲ್ಯಾಣಪುರ ಫಟಕವು ನಡೆಸಿರುವ ಆಷಾಢದಲ್ಲಿ ಜೇಸಿಗಳ ಚತ್ತಾರ ಎನ್ನುವ ಕಾರ್ಯಕ್ರಮದಲ್ಲಿ ಆಷಾಢ ಮಾಸದ 25 ಕ್ಕೂ ಅಧಿಕ ಬಗೆಯ ಆಹಾರ ಪದಾರ್ಥಗಳು ಪ್ರದರ್ಶನ ಕಾರ್ಯಕ್ರಮ ಇತ್ತೀಚಿಗೆ ಚೇತನ ಪ್ರೌಢಶಾಲಾ ಸಂಭಾಗಣದಲ್ಲಿ ನಡೆಯಿತು.
ಜೇಸಿಐ ಕಲ್ಯಾಣಪುದ ಫಟಕಾದ್ಯಕ್ಷೆ ಅನಿತಾ ನರೇಂದ್ರ ಕುಮಾರ್ ಸಭಾಧ್ಯಕ್ಷತೆ ವಹಿಸಿದ್ದರು, ಸಾಂಪ್ರದಾಯಿಕ ಶೈಲಿಯ ಆಟವಾದ ಚೆನ್ನೆಮಣೆ ಹಾಗೂ ಗುಡ್ನ ಆಡುವುದರ ಮೂಲಕ ಜೇಸಿಐ ಇಂಡಿಯಾ ಫೌಂಡೇಶನ್ ನಿರ್ದೇಶಕ ಆಲನ್ ರೋಹನ್ ವಾಜ್ ಉದ್ಘಾಟಿಸಿದರು. ಚೇತನಾ ಫ್ರೌಡಶಾಲೆ ಹಂಗಾರಕಟ್ಟೆ ಇಲ್ಲಿನ ನಿವೃತ್ತ ಮುಖ್ಯೋಪಾಧ್ಯಾಯ ಜಿ.ಗಣೇಶ್ ಇವರು ಆಷಾಢ ಮಾಸದ ಹಳೆ ನೆನಪುಗಳು ಮತ್ತು ಆಷಾಢ ಮಾಸದ ತಿಂಡಿ ತಿನಿಸಿನ ಬಗ್ಗೆ ಮಾಹಿತಿ ತಿಳಿಸಿದರು. ಜೇಸಿ ಮಿತ್ರ ವಲಯ ಉಪಾಧ್ಯಕ್ಷೆ ಜಯಶ್ರೀ , ಜೇಸಿ ನಿರ್ದೇಶಕರಾದ ಅಕ್ಷತಾ ಗಿರೀಶ್ ಐತಾಳ್, ಪ್ರವೀಣ್ ಪೂಜಾರಿ, ಸ್ಥಾಪಕ ಅಧ್ಯಕ್ಷ ಜಗದೀಶ್ ಕೆಮ್ಮಣ್ಣು , ಲೇಡಿ ಜೇಸಿ ಸಂಯೋಜಕರಾದ ಶಾಲಿನಿ ಸುರೇಶ್, ಕಾರ್ಯದರ್ಶಿಯವರಾದ ಲವೀನಾ ಲೂಯಿಸ್, ಜೇಸಿ ವಿಶೇಷ ಆಹ್ವಾನಿತರಾದ ನಿರಂತರ.ಎನ್ ಹಾಗೂ ಕಾರ್ಯಕ್ರಮದ ಸಂಯೋಜಕರಾದ ರೋಹಿಣಿ ಚಿತ್ರಕುಮಾರ್ , ಅನುಸೂಯ ಅನಿಲ್ ಉಪಸ್ಥಿತರಿದ್ದರು. ಜೇಸಿ ಸದಸ್ಯರು ಹಾಗು ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಜೇಸಿಐ ಕಲ್ಯಾಣಪುರ ಫಟಕವು ನಡೆಸಿರುವ ಆಷಾಢದಲ್ಲಿ ಜೇಸಿಗಳ ಚತ್ತಾರ ಎನ್ನುವ ಕಾರ್ಯಕ್ರಮ ಸಾಂಪ್ರದಾಯಿಕ ಶೈಲಿಯ ಆಟವಾದ ಚೆನ್ನೆಮಣೆ ಹಾಗೂ ಗುಡ್ನ ಆಡುವುದರ ಮೂಲಕ ಜೇಸಿಐ ಇಂಡಿಯಾ ಫೌಂಡೇಶನ್ ನಿರ್ದೇಶಕ ಆಲನ್ ರೋಹನ್ ವಾಜ್ ಉದ್ಘಾಟಿಸಿದರು. ಜೇಸಿಐ ಕಲ್ಯಾಣಪುದ ಫಟಕಾದ್ಯಕ್ಷೆ ಅನಿತಾ ನರೇಂದ್ರ ಕುಮಾರ್, ಚೇತನಾ ಫ್ರೌಡಶಾಲೆ ಹಂಗಾರಕಟ್ಟೆ ಇಲ್ಲಿನ ನಿವೃತ್ತ ಮುಖ್ಯೋಪಾಧ್ಯಾಯ ಜಿ.ಗಣೇಶ್ ಇದ್ದರು.














Leave a Reply