Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಡಿ – ವಿವಿಧ ಸರಕಾರಿ ಕಛೇರಿ ನವೀಕೃತ ಕಟ್ಟಡಕ್ಕೆ ಸ್ಥಳಾಂತರ
ಜನಸಾಮಾನ್ಯರಿಗೆ ನೈಜ ಸೇವೆಗೆ ಸ್ಥಳೀಯಾಡಳಿತ ಆದ್ಯತೆ- ಪ್ರಭಾಕರ ಮೆಂಡನ್

ಕೋಟ: ಗ್ರಾಮೀಣ ಭಾಗದಲ್ಲಿ ಜನಸಾಮಾನ್ಯರಿಗೆ ಸುಲಲಿತ ಸೇವೆ ಸುಸಜ್ಜಿತ ಕಟ್ಟದದ ಅವಶ್ಯಕತೆವನ್ನು ಸ್ಥಳೀಯಾಡಳಿತವಾಗಿ ಕೋಡಿ ಪಂಚಾಯತ್ ಮನಗಂಡಿದೆ ಎಂದು ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಪ್ರಭಾಕರ್ ಮೆಂಡನ್ ಅಭಿಪ್ರಾಯಪಟ್ಟರು.

ಗುರುವಾರ ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ವಿವಿಧ ಸರಕಾರಿ ಸೌಲಭ್ಯಗಳನ್ನು ಸುಸಜ್ಜಿತ ಕಟ್ಟಡದಲ್ಲಿ ಒದಗಿಸುವ ಉದ್ದೇಶದಿಂದ ಗ್ರಾಮವಿಕಾಸ ಯೋಜನೆಯಡಿ ನಿರ್ಮಾಣಗೊಂಡ ನವೀಕೃತ ಕಟ್ಟಡದಲ್ಲಿ  ಘನ ಹಾಗೂ ದ್ರವ ತ್ಯಾಜ್ಯ ಕಟ್ಟಡ, ಗ್ರಾಮಲೆಕ್ಕಾಧಿಕಾರಿ, ಗ್ರಂಥಾಲಯ , ಅಂಚೆ ಕಛೇರಿ, ಸಂಜೀವಿನಿ ಒಕ್ಕೂಟದ ಕಛೇರಿಗಳನ್ನು ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡಿ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಅತ್ಯಗತ್ಯವಾಗಿದ್ದು ಈ ದಿಸೆಯಲ್ಲಿ ಗ್ರಾಮಪಂಚಾಯತ್ ಆದಾಯದ ದಿಸೆಯನ್ನು ನೋಡದೆ ಈ ಅಮೂಲಾಗ್ರ ಬದಲಾಣೆ ಅವಕಾಶ ನೀಡಲಾಗಿದೆ ಇದರ ಪ್ರಯೋಜನ ಜನಸಾಮಾನ್ಯರಿಗೆ ನಿರಂತವಾಗಿ ಲಭಿಸಲಿ ಎಂದು ಹಾರೈಸಿದರು.

ಘನ ಹಾಗೂ ದ್ರವ ತ್ಯಾಜ್ಯ ಘಟಕವನ್ನು ಕೋಡಿ ಅಂಚೆ ಕಛೇರಿಯ ಅಧಿಕಾರಿ ನಾಗೇಂದ್ರ ನಾವಡ ಉದ್ಘಾಟಿಸಿದರು. ಗ್ರಾಮಲೆಕ್ಕಾಧಿಕಾರಿ ಕಛೇರಿಯನ್ನು ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರಮೂರ್ತಿ , ಗ್ರಂಥಾಲಯನ್ನು ಜಿಲ್ಲಾ ಶಿಕ್ಷಣ ಫೌಂಡೇಶನ್ ಸಂಯೋಜಕಿ ರೀನಾ ಹೆಗ್ಡೆ,ಸಂಜೀವಿನಿ ಒಕ್ಕೂಟದ ಕಛೇರಿಯನ್ನು ಒಕ್ಕೂಟದ ಅಧ್ಯಕ್ಷೆ ದೀಪಾ, ಅಂಚೆ ಕಛೇರಿಯನ್ನು ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಕೆ ಪ್ರಭಾಕರ್ ಮೆಂಡನ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗ್ರಾಮಲೆಕ್ಕಾಧಿಕಾರಿ ಗಿರೀಶ್ ಕುಮಾರ್, ಪಂಚಾಯತ್ ಸದಸ್ಯರಾದ ಕೃಷ್ಣ ಪೂಜಾರಿ.ಪಿ., ಗೀತಾ ಕಾರ್ವಿ, ಸತೀಶ್ ಕುಂದರ್, ರಶ್ಮಿತಾ, ಪ್ರಸಾದ್, ಸರಸ, ಅಂತೋನಿ , ಕೋಡಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಘವೇಂದ್ರ ಅಡಿಗ,ಗ್ರಂಥಪಾಲಕಿ ಯಶೋಧ, ಲ.ಸೋ.ಬಂಗೇರ ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಾಧಿಕಾ, ಸಂಜೀವಿನಿ ತಾಲೂಕು ಸಂಯೋಜನಾಧಿಕಾರಿ ಸ್ವಾತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಂಪಾ, ಕೋಡಿ ಮೀನುಗಾರಿಕಾ ಸಂಘದ ಅಧ್ಯಕ್ಷ ಅಶೋಕ್ ತಿಂಗಳಾಯ, ಶಿಕ್ಷಣ ಫೌಂಡೇಶನ್ ತಾಲೂಕು ಸಂಯೋಜಕಿ ಶಿಲ್ಪಾ ವಿಜಯ್ , ಗ್ರಾಮಸಹಾಯಕಿ ಸರೋಜ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ,ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚಾಯತ್ ಪಿ.ಡಿ ಓ ರವೀಂದ್ರ ರಾವ್ ಸ್ವಾಗತಿಸಿ ನಿರೂಪಿಸಿದರು.

ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ವಿವಿಧ ಸರಕಾರಿ ಸೌಲಭ್ಯಗಳನ್ನು ಸುಸಜ್ಜಿತ ಕಟ್ಟಡದಲ್ಲಿ ಒದಗಿಸುವ ಉದ್ದೇಶದಿಂದ ಗ್ರಾಮವಿಕಾಸ ಯೋಜನೆಯಡಿ ನಿರ್ಮಾಣಗೊಂಡ ನವೀಕೃತ ಕಟ್ಟಡದಲ್ಲಿ  ಘನ ಹಾಗೂ ದ್ರವ ತ್ಯಾಜ್ಯ ಕಟ್ಟಡ, ಗ್ರಾಮಲೆಕ್ಕಾಧಿಕಾರಿ, ಗ್ರಂಥಾಲಯ , ಅಂಚೆ ಕಛೇರಿ, ಸಂಜೀವಿನಿ ಒಕ್ಕೂಟದ ಕಛೇರಿಗಳನ್ನು ಲೋಕಾರ್ಪಣಾ ಸಮಾರಂಭ ಜರಗಿತು.

Leave a Reply

Your email address will not be published. Required fields are marked *