
ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ಬೆಳ್ಳಿ ಹಬ್ಬದ ವರ್ಷಾಚರಣೆಯ ಅಂಗವಾಗಿ ಸಾಧಕರಿಗೆ ರಜತ ಗೌರವಾರ್ಪಣೆ ನೀಡುತ್ತಿದ್ದು, ಈ ಹಿನ್ನಲ್ಲೆಯಲ್ಲಿ ಈ ತಿಂಗಳು ಕುಂದಗನ್ನಡದ ಭಾಷಾ ರಾಯಬಾರಿ ಮನೋಹರ್ ಹೆಗ್ಡೆ(ಮನು ಹಂದಾಡಿ) ಇವರನ್ನು ಇವರನ್ನು ಆಯ್ಕೆಗೊಳಿಸಲಾಗಿದೆ.
ಪಂಚವರ್ಣ ಸಂಸ್ಥೆ ನೀಡುತ್ತಿರುವ ಎಂಟನೇ ಸಾಧಕ ಶಕ್ತಿಯಾಗಿದ್ದು, ಈ ಹಿಂದೆ ಸಹಕಾರಿ ಕ್ಷೇತ್ರದಲ್ಲಿ ಸಾಧನೆಗೈದ ಸಹಕಾರಿ ಕ್ಷೇತ್ರದ ಸಾಧಕ ಜಿ. ತಿಮ್ಮ ಪೂಜಾರಿ, ಸಮಾಜಸೇವಕ ಈಶ್ವರ್ ಮಲ್ಪೆ, ಅನಾಥರ ಬದುಕಿನ ಆಶಾಕಿರಣ ಹೊಸಬೆಳಕು ವಿನಯಚಂದ್ರ ಸಾಸ್ತಾನ, ವಿಶೇಷಚೇತನ ಸಾಧಕಿ ಲಲಿತಾ ಪೂಜಾರಿ, ಸಾಲಿಗ್ರಾಮದ ಹಿರಿಯ ವೈದ್ಯರಾದ ಡಾ. ವಿಶ್ವೇಶ್ವರ ತುಂಗ, ಸಹಕಾರಿ ಕ್ಷೇತ್ರದ ಕೊರಗ ಪೂಜಾರಿ , ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಪಾರಂಪಳ್ಳಿ ಗಣೇಶ್ ಅಡಿಗ, ವೆರಿಕೋಸ್ ತಜ್ಞ ಡಾ.ಎಂ ವಿ ಉರಾಳ ಇವರುಗಳನ್ನು ಗುರುತಿಸಿದ್ದು ಇಲ್ಲಿ ಸ್ಮರಿಸಬಹುದಾಗಿದೆ.
ಇದೇ ಆ.6 ರಂದು ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ಆಸಾಡಿ ಒಡ್ರ್ ವೇದಿಕೆಯಲ್ಲಿ ಈ ಗೌರವ ಕಾರ್ಯಕ್ರಮ ನಡೆಯಲಿದೆ ಎಂದು ಪಂಚವರ್ಣ ಸಂಸ್ಥೆಯ ಅಧ್ಯಕ್ಷ ಅಜಿತ್ ಆಚಾರ್ಯ ತಿಳಿಸಿದ್ದಾರೆ.














Leave a Reply