
ಕೋಟ: ಕರಾವಳಿ ಭಾಗದ ಹಕ್ಕು ಪತ್ರ ಸಮಸ್ಯೆಯ ಕುರಿತು ಒರ್ವ ಅಧಿಕಾರಿಯಾಗಿ ನನ್ನ ಕರ್ತವ್ಯ ಪಾಲಿಸಿದ ಹೆಮ್ಮೆ ಇದೆ ಎಂದು ವರ್ಗಾವಣೆಗೊಂಡ ಬ್ರಹ್ಮಾವರ ತಾಲೂಕು ದಂಡಾಧಿಕಾರಿ ರಾಜಶೇಖರಮೂರ್ತಿ ಹೇಳಿದರು. ಕೋಡಿ ಶಾಲಾ ವಠಾರದಲ್ಲಿ ಕೋಡಿ ಗ್ರಾಮಪಂಚಾಯತ್, ಕೋಡಿ ಗ್ರಾಮಸ್ಥರು, ಕೋಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡ ಕೃತಜ್ಞತಾ ಸಭೆಯಲ್ಲಿ ಮಾತನಾಡಿ ಗೌತಮ ಬುದ್ಧ , ನಾರಯಣ ಗುರು, ಅಂಬೇಡ್ಕರ್ ಆದರ್ಶ ಇಟ್ಟುಕೊಂಡು ಜನಸಾಮಾನ್ಯರ ನೋವು ನಲ್ಲಿವುಗಳಿಗೆ ಸ್ಪಂದಿಸಿದ್ದೇನೆ, ಇಲ್ಲಿನ ಮೀನುಗಾರರ ಬದುಕಿನ ಬಗ್ಗೆ ಅಧ್ಯಯನ ನಡೆಸಿದ್ದೇನೆ ಕ್ಲಿಷ್ಟಕರವಾದ ಬದುಕು ಮೀನುಗಾರರದ್ದಾಗಿದೆ. ಸಾಕಷ್ಟು ವರ್ಷಗಳಿಂದ ನೆನೆಗುದ್ದಿಗೆ ಬಿದ್ದ ಹಕ್ಕುಪತ್ರ ಸಮಸ್ಯೆ ಕುರಿತು ಅಧ್ಯಯನ ನಡೆಸಿ ಇದೀಗ 103 ಕುಟುಂಬಗಳಿಗೆ ದೊರಕುವಂತೆ ವ್ಯವಸ್ಥೆ ಮಾಡಲಾಗಿದೆ. ಇನ್ನುಳಿದ ಹಕ್ಕುಪತ್ರದ ಕುರಿತು ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಕ್ಯಾಬಿನೆಟ್ ಮೂಲಕ ಅಂತಿಮಗೊಳಿಸಬೇಕಾಗಿದೆ. ಮನಸ್ಸಿನ ಕಲ್ಮಶ ತೊಳೆದು ಜೀವನದಲ್ಲಿ ಪ್ರೀತಿ ಶ್ರೇಷ್ಠತೆಯನ್ನು ಮೆರೆಯುವಂತೆ ಮಾಡಿ ಅದರ ಆಧಾರದ ಮೇಲೆ ಶಾಂತಿ ಸೌಹಾರ್ದತೆಯ ಮೂಲಕ ಬದುಕು ಸಾಧಿಸಿ ಯಶಸ್ಸು ನಿಮ್ಮ ದಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ತಾಲೂಕು ದಂಢಾಧಿಕಾರಿ ರಾಜಶೇಖರಮೂರ್ತಿ ಇವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು. ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಪ್ರಭಾಕರ್ ಮೆಂಡನ್ ಮಾತನಾಡಿ ಒರ್ವ ಅಧಿಕಾರಿಯಾಗಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ.ಅವರ ಜೀವನದ ಬದುಕೆ ನಮ್ಮೆಲ್ಲರಿಗೆ ಸ್ಪೂರ್ತಿಯ ಸೆಲೆಯಾಗಲಿ,ಅಧಿಕಾರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ಉಪತಹಶಿಲ್ದಾರ್ ರಾಘವೇಂದ್ರ, ಗ್ರಾಮದ ಹಿರಿಯರಾದ ಲಕ್ಷ್ಮಣ್ ಸುವರ್ಣ, ಶಂಕರ್ ಬಂಗೇರ, ಗ್ರಾಮ ಲೆಕ್ಕಿಗ ಗಿರೀಶ್ ಕುಮಾರ್, ಕೋಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಜಯ ತಿಂಗಳಾಯ, ಪಂಚಾಯತ್ ಸದಸ್ಯರಾದ ಗೀತಾ ಕಾರ್ವಿ, ಕೃಷ್ಣ ಪೂಜಾರಿ, ಅಂತೋನಿ ನಾಯ್ಕ್, ಸತೀಶ ಕುಂದರ್, ಕೋಡಿ ಮೀನುಗಾರ ಸಂಘದ ಅಧ್ಯಕ್ಷ ಅಶೋಕ್ ತಿಂಗಳಾಯ ಮತ್ತಿತರರು ಉಪಸ್ಥಿತರಿದ್ದರು. ಸ್ಥಳೀಯರಾದ ಮುತ್ತಪ್ಪ ಸಾಲಿಯಾನ್ ಪ್ರಾರ್ಥನೆಗೈದು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಕಾರ್ಯಕ್ರಮ ನಿರೂಪಿಸಿ,ಸುಧೀರ್ ಕುಂದರ್ ವಂದಿಸಿದರು.
ಕೋಡಿ ಶಾಲಾ ವಠಾರದಲ್ಲಿ ಕೋಡಿ ಗ್ರಾಮಪಂಚಾಯತ್, ಕೋಡಿ ಗ್ರಾಮಸ್ಥರು, ಕೋಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡ ಕೃತಜ್ಞತಾ ಸಭೆಯಲ್ಲಿ ತಾಲೂಕು ದಂಢಾಧಿಕಾರಿ ರಾಜಶೇಖರಮೂರ್ತಿ ಇವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು. ಬ್ರಹ್ಮಾವರ ಉಪತಹಶಿಲ್ದಾರ್ ರಾಘವೇಂದ್ರ, ಗ್ರಾಮದ ಹಿರಿಯರಾದ ಲಕ್ಷ್ಮಣ್ ಸುವರ್ಣ, ಶಂಕರ್ ಬಂಗೇರ, ಗ್ರಾಮ ಲೆಕ್ಕಿಗ ಗಿರೀಶ್ ಕುಮಾರ್, ಕೋಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಜಯ ತಿಂಗಳಾಯ ಇದ್ದರು.














Leave a Reply