
ಕೋಟ: ಸಾಹೇಬ್ರಕಟ್ಟೆ ಮೈಂಡ್ ಲೀಡ್ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ವಿದ್ವಾನ್ ಮಹಾಬಲೇಶ್ವರ ಭಾಗವತ್ ಶಿಷ್ಯರಾದ ಅಶೋಕ್ ಆಚಾರ್ಯ ಸಾಹೇಬ್ರಕಟ್ಟೆ ಅವರ ಗುರುತ್ವದಲ್ಲಿ ರಾಗಶ್ರೀ ಹಿಂದೂಸ್ಥಾನಿ ಸಂಗೀತ ಶಿಕ್ಷಣ ಕೇಂದ್ರ ಉದ್ಘಾಟನೆ ಆ.6 ರಂದು ನೆರವೇರಿತು.
ಉದ್ಯಮಿ ರಾಘವೇಂದ್ರ ಆಚಾರ್ಯ ಸಾಹೇಬ್ರಕಟ್ಟೆ ಶಿಕ್ಷಣ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ಸಂಗೀತಕ್ಕೆ ಮನಸ್ಸನ್ನು ಅರಳಿಸುವ ವಿಶೇಷ ಶಕ್ತಿ ಇದೆ. ಮಕ್ಕಳಿಗೆ ಬಾಲ್ಯದಲ್ಲೇ ಸಂಗೀತ ಶಿಕ್ಷಣ ನೀಡಿದಲ್ಲಿ ಭವಿಷ್ಯ ಉಜ್ವಲವಾಗಲಿದೆ ಎಂದರು.
ರಾಗಶ್ರೀ ಟ್ರಸ್ಟ್ ಅಧ್ಯಕ್ಷ, ಸಂಗೀತ ಗುರುಗಳಾದ ವಿದ್ವಾನ್ ಅಶೋಕ್ ಆಚಾರ್ಯ ಸಾಹೇಬ್ರಕಟ್ಟೆ ಮಾತನಾಡಿ, ಸಂಗೀತ ಶಾಲೆಯ ಕಾರ್ಯವೈಖರಿ, ವಿಶೇಷತೆ ತಿಳಿಸಿದರು ಹಾಗೂ ತನ್ನ ಸಂಗೀತ ಜೀವನದ ಯಶಸ್ವಿಗೆ ಗುರುಗಳಾದ
ವಿದ್ವಾನ್ ಮಹಾಬಲೇಶ್ವರ ಭಾಗವತ್ ಕಾರಣ ಎಂದರು. ಹಿರಿಯರಾದ ಮಂಜಯ್ಯ ಆಚಾರ್ಯ ಪಡುಮುಂಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಉಪೇಂದ್ರ ಕಿಣಿ ಗರಿಕೆಮಠ, ವೈ. ಸಂಕಯ್ಯ ಶೆಟ್ಟಿ ಮೈಂಡ್ ಲೀಡ್ ಸಂಸ್ಥೆಯ ಮುಖ್ಯ ಶಿಕ್ಷಕಿ ಸಂಧ್ಯಾ ಶೆಟ್ಟಿ, ಸಂಸ್ಥೆಯ ಟ್ರಸ್ಟಿ ಕೆ. ಅಜಿತ್ ಕುಮಾರ್ ಉಪಸ್ಥಿತರಿದ್ದರು.
ಟ್ರಸ್ಟ್ ಸದಸ್ಯ ಪಾಂಡುರಂಗ ಆಚಾರ್ಯ ಸ್ವಾಗತಿಸಿ, ಟ್ರಸ್ಟ್ ನ ಶ್ರೀದೇವಿ ಅಶೋಕ್ ಆಚಾರ್ಯ ಕಾರ್ಯಕ್ರಮ ನಿರೂಪಿದರು. ಸಾಹೇಬ್ರಕಟ್ಟೆ ಮೈಂಡ್ ಲೀಡ್ ಶಿಕ್ಷಣ ಸಂಸ್ಥೆಯ ವಠಾರದಲ್ಲಿ ವಿದ್ವಾನ್ ಮಹಾಬಲೇಶ್ವರ ಭಾಗವತ್ ಶಿಷ್ಯರಾದ ಅಶೋಕ್ ಆಚಾರ್ಯ ಸಾಹೇಬ್ರಕಟ್ಟೆ ಅವರ ಗುರುತ್ವದಲ್ಲಿ ರಾಗಶ್ರೀ ಹಿಂದೂಸ್ಥಾನಿ ಸಂಗೀತ ಶಿಕ್ಷಣ ಕೇಂದ್ರವನ್ನು ಉದ್ಯಮಿ ರಾಘವೇಂದ್ರ ಆಚಾರ್ಯ ಸಾಹೇಬ್ರಕಟ್ಟೆ ಶಿಕ್ಷಣ ಕೇಂದ್ರಕ್ಕೆ ಚಾಲನೆ ನೀಡಿದರು. ಹಿರಿಯರಾದ ಉಪೇಂದ್ರ ಕಿಣಿ ಗರಿಕೆಮಠ, ವೈ. ಸಂಕಯ್ಯ ಶೆಟ್ಟಿ ಮೈಂಡ್ ಲೀಡ್ ಸಂಸ್ಥೆಯ ಮುಖ್ಯ ಶಿಕ್ಷಕಿ ಸಂಧ್ಯಾ ಶೆಟ್ಟಿ, ಸಂಸ್ಥೆಯ ಟ್ರಸ್ಟಿ ಕೆ. ಅಜಿತ್ ಕುಮಾರ್ ಉಪಸ್ಥಿತರಿದ್ದರು.














Leave a Reply