
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಕುಂದಾಪುರ ತಾಲೂಕಿನ ತೆಕ್ಕಟ್ಟೆ ವಲಯದ ಕೊರವಡಿ ಕಾರ್ಯ ಕ್ಷೇತ್ರದಲ್ಲಿ ಶಾಲಾ ಕೈತೋಟ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಕೊರವಡಿ ಶಾಲೆಯ ಮುಖ್ಯೋಪಾಧ್ಯಾಯಿನಿ ಮಾಲತಿ ಹಾಗೂ ಸಹ ಶಿಕ್ಷಕರಾದ ಶೋಭಾ ಮತ್ತು ಸುದೀಪ್ ತರಕಾರಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರದ ಎನ್‍ಡಿಆರ್‍ಎಫ್ ಸಂಯೋಜಕರು,ಕೊರವಡಿ ಒಕ್ಕೂಟದ ಸದಸ್ಯರ ಸಹಕಾರದೊಂದಿಗೆ ಶಾಲಾ ಕೈತೋಟದಲ್ಲಿ ಹೂವಿನ ಗಿಡ ಮತ್ತು ತರಕಾರಿ ಗಿಡವನ್ನು ನೆಡಲಾಯಿತು.
ವಲಯದ ಮೇಲ್ವಿಚಾರಕರಾದ ರಾಧಿಕಾ ಗ್ರಾಮ ಅಭಿವೃದ್ಧಿ ಯೋಜನೆಯ ಶಾಲಾ ಕೈತೋಟದ ಮಹತ್ವದ ಕುರಿತು ಮಾಹಿತಿ ನೀಡಿದರು. ವಿಪತ್ತು ಪಡೆಯ ಸಂಯೋಜಕಿ ಪ್ರಭಾವತಿ.ಎಂ, ಅಂಗನವಾಡಿ ಕಾರ್ಯಕರ್ತೆ ಶೋಭಾ, ಸಹಾಯಕಿ ಪದ್ಮ, ಒಕ್ಕೂಟದ ಅಧ್ಯಕ್ಷೆ ಶೈಲಜಾ , ಪದಾಧಿಕಾರಿ ಗೀತಾ ಮತ್ತು ಪೂರ್ಣಿಮಾ ಒಕ್ಕೂಟದ ಸೇವಾ ಪ್ರತಿನಿಧಿ ಪ್ರೇಮಾ ವಿಜಯ್ ಸದಸ್ಯರು ಇದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಕುಂದಾಪುರ ತಾಲೂಕಿನ ತೆಕ್ಕಟ್ಟೆ ವಲಯದ ಕೊರವಡಿ ಕಾರ್ಯ ಕ್ಷೇತ್ರದಲ್ಲಿ ಶಾಲಾ ಕೈತೋಟ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.













Leave a Reply