
ಕೋಟ: ಕೋಟ ಗ್ರಾಮಪಂಚಾಯತ್‍ನ ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯು ಕೋಟ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಇತ್ತಿಚಿಗೆ ನಡೆಯಿತು. ಪ್ರಕೃತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕಲಾವತಿ ಅಶೋಕ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ , ಒಕ್ಕೂಟದ ಬ್ರಹ್ಮಾವರ ವಲಯ ಮೇಲ್ವಿಚಾರಕಿ ಸ್ವಾತಿ , ಜೊತೆ ಕಾರ್ಯದರ್ಶಿ ಜಯಲಕ್ಷ್ಮಿ, ಕೃಷಿ ಉದ್ಯೋಗ ಸಖಿ, ಎಂ.ಬಿ.ಕೆ, ಎಲ್ ಸಿ ಆರ್ ಪಿ, ಒಕ್ಕೂಟದ ಪದಾಧಿಕಾರಿಗಳು ನೂರಕ್ಕೂ ಅಧಿಕ ಸಂಜೀವಿನಿ ಸದಸ್ಯರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಂಜೀವಿನಿ ಸದಸ್ಯರ ಸಾಮರ್ಥ್ಯ ಬಲವರ್ಧನೆ ತರಬೇತಿ ಪಡೆದರು,ಅಲ್ಲದೆ ಸದಸ್ಯರು ರಸ್ತೆ ದುರಸ್ತಿಗಾಗಿ ಮನವಿ ಪತ್ರ ಸಲ್ಲಿಸಿದರು. ಸಭೆಯ ವಾರ್ಷಿಕ ವರದಿಯನ್ನು ಒಕ್ಕೂಟದ ಕಾರ್ಯದರ್ಶಿ ಶಾಂತ ವಾಚಿಸಿದರು. ಜಮಾ ಖರ್ಚಿನ ವಿವರ ಎಂ.ಬಿ.ಕೆ ಪ್ರೇಮ ಮಂಡಿಸಿದರು.
ಕೋಟ ಗ್ರಾಮಪಂಚಾಯತ್‍ನ ಪ್ರಕೃತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆಯು ಕೋಟ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಇತ್ತಿಚಿಗೆ ನಡೆಯಿತು.













Leave a Reply