
ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ಬೆಳ್ಳಿ ಹಬ್ಬದ ಅಂಗವಾಗಿ ರಜತ ಗೌರವ ಪ್ರಧಾನ ಕಾರ್ಯಕ್ರಮ ಇತ್ತೀಚಿಗೆ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ನಡೆಯಿತು.
ಈ ತಿಂಗಳ ಸಾಧಕರಾಗಿ ಕುಂದಗನ್ನಡದ ರಾಯಬಾರಿ ಮನು ಹಂದಾಡಿ(ಮನೋಹರ್ ಹೆಗ್ಡೆ) ಇವರಿಗೆ ರಜತ ಗೌರವ ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿ ಗ್ರಾಮೀಣ ಭಾಷೆ ಅಥವಾ ಅದರ ಸೊಗಡುಗಳು ಪ್ರಸ್ತುತ ಯುವ ಪೀಳಿಗೆಗೆ ನೀಡಬೇಕಾಗಿದೆ. ಅದನ್ನು ಉಳಿಸಿ ಬೆಳೆಸಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ,ಭಾಷೆಯ ಬಗ್ಗೆ ಕೀಳರಿಮೆ ಸಲ್ಲ ಗ್ರಾಮೀಣ ಭಾಷೆ ಅದರಿಂದ ನಡೆಸಲ್ಪಡುವ ಜೀವನಕ್ರಮ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿದೆ ಅದನ್ನು ಮುಂದಿನ ತಲೆಮಾರಿಗೆ ಕೊಂಡ್ಯೊಯ್ಯಬೇಕಿದೆ. ಸಾಧಕರನ್ನು ಗುರುತಿಸುವ ಸಂಘಸಂಸ್ಥೆಗಳ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕೋಟದ ಗೀತಾನಂದ ಟ್ರಸ್ಟ್‍ನ ನಿರ್ದೇಶಕಿ ವೈಷ್ಣವಿ ರಕ್ಷಿತ್ ಕುಂದರ್, ಮಣೂರು ಸ್ನೇಹಕೂಟದ ಸಂಚಾಲಕಿ ಭಾರತಿ ವಿ ಮಯ್ಯ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಸ್ಥಾಪಕಾಧ್ಯಕ್ಷ ಸುರೇಶ ಗಾಣಿಗ, ಗೌರವಾಧ್ಯಕ್ಷ ಸತೀಶ ಎಚ್ ಕುಂದರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್, ರೈತ ಧ್ವನಿ ಸಂಘ ಕೋಟ ಅಧ್ಯಕ್ಷ ಜಯರಾಮ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಣೈ, , ವಸಂತಿ ಹಂದಟ್ಟು, ಲಲಿತಾ ಪೂಜಾರಿ, ಪ್ರೇಮಾ ಪ್ರಭಾಕರ ಇದ್ದರು. ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.
ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ಬೆಳ್ಳಿ ಹಬ್ಬದ ಅಂಗವಾಗಿ ಕುಂದಗನ್ನಡದ ರಾಯಬಾರಿ ಮನು ಹಂದಾಡಿ (ಮನೋಹರ್ ಹೆಗ್ಡೆ) ಇವರಿಗೆ ರಜತ ಗೌರವ ನೀಡಿ ಗೌರವಿಸಲಾಯಿತು. ಕೋಟದ ಗೀತಾನಂದ ಟ್ರಸ್ಟ್‍ನ ನಿರ್ದೇಶಕಿ ವೈಷ್ಣವಿ ರಕ್ಷಿತ್ ಕುಂದರ್ , ಮಣೂರು ಸ್ನೇಹಕೂಟದ ಸಂಚಾಲಕಿ ಭಾರತಿ ವಿ ಮಯ್ಯ , ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್‍ಇದ್ದರು.













Leave a Reply