
ಬ್ರಹ್ಮವರ ತಾಲೂಕಿನ ಕೋಟ ವಲಯದ ಗುಡುಮಿ ಕಾರ್ಯಕ್ಷೇತ್ರದ ಭಗವತಿ ಜ್ಞಾನವಿಕಾಸ ಕೇಂದ್ರದಲ್ಲಿ ಬೀದಿ ನಾಟಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ,ಈ ಕಾರ್ಯಕ್ರಮವನ್ನು ನಿವ್ರತ್ತ ಶಿಕ್ಷಕರಾದ ರಾಮಚಂದ್ರ ಐತಾಳ ರವರು ಉದ್ಘಾಟಿಸಿ ಜ್ಞಾನವಿಕಾಸ ಕಾರ್ಯಕ್ರಮದಿಂದ ಮಹಿಳೆಯರಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬೀದಿ ನಾಟಕದ ಮೂಲಕ ನೀರನ್ನು ಮಿತವ್ಯಯವಾಗಿ ಬಳಕೆ ಮಾಡುವ ಬಗ್ಗೆ ಹಾಗೂ ಇಂಗು ಗುಂಡಿಗಳ ಮೂಲಕ ನೀರನ್ನು ಕಾಪಾಡಿಕೊಳ್ಳುವ ಬಗ್ಗೆ ಹಾಗೂ ಜ್ಞಾನವಿಕಾಸ ಯೌಟ್ಯೂಬ್ ಚಾನೆಲ್ ನೋಡುವುದರಿಂದ ಏನಲ್ಲ ಪ್ರಯೋಜನಗಳಿವೆ ಎನ್ನುವ ಬಗ್ಗೆ ಬೀದಿ ನಾಟಕದ ಮೂಲಕ ಸಿರೂರಿನ ಶ್ರೀ ವಿನಾಯಕ ಬೀದಿ ನಾಟಕ ತಂಡದವರು ಪ್ರದರ್ಶನ ಮಾಡಿದರು.

ನಂತರ ಸಾಲಿಗ್ರಾಮ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಸುಲತ ಹೆಗ್ಡೆ ರವರು ಅಧ್ಯಕ್ಷ ಸ್ಥಾನ ವಹಿಸಿ ಜ್ಞಾನವಿಕಾಸ ಕಾರ್ಯಕ್ರಮದಿಂದ ಮಹಿಳೆಯರಿಗೆ ಉತ್ತಮ ಅವಕಾಶಗಳು ಸಿಕ್ಕಿವೆ, ಸ್ವಉದ್ಯೋಗದ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಇನ್ನೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಕನಕ ರವರು ತಾಲೂಕಿನ ಸಮನ್ವಯ ಅಧಿಕಾರಿ ಪುಷ್ಪಲತಾ ಸೇವಾ ಪ್ರತಿನಿಧಿ ಶಶಿಕಲಾ ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.














Leave a Reply