Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾಗಿ 3ನೇ ಬಾರಿ ಅವಿರೋಧವಾಗಿ ಶ್ರೀ ರಾಜಶೇಖರ್ ಕೋಟ್ಯಾನ್ ಆಯ್ಕೆ

ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾಗಿ 3ನೇ ಬಾರಿ ಅವಿರೋಧವಾಗಿ ಶ್ರೀ ರಾಜಶೇಖರ್ ಕೋಟ್ಯಾನ್ ಆಯ್ಕೆ ಉಪಾಧ್ಯಕ್ಷರಾಗಿ ಶ್ರೀ ಸೂರ್ಯಕಾಂತ ಜೆ. ಸುವರ್ಣ ಮತ್ತು ಶ್ರೀ ಹರೀಶ್ ಡಿ. ಸಾಲ್ಯಾನ್ ಆಯ್ಕೆ

ಡಾ.ರಾಜಶೇಖರ್ ಕೋಟ್ಯಾನ್ ರವರು
ಶ್ರೀ ಕ್ಷೇತ್ರ ಗೆಜ್ಜೇಗಿರಿಯ 2020 ರಲ್ಲಿ ನಡೆದ ಬ್ರಹ್ಮಕಲಶೋತ್ಸವವು ಅಭೂತಪೂರ್ವವಾಗಿ ನೆರವೇರಲು ಸಹಕರಿಸಿದವರು ಹಾಗೂ ಬಿಲ್ಲವರ ಸಂಘಟನೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ನೂರಾರು ಕನಸುಗಳನ್ನು ಹೊತ್ತುಕೊಂಡವರು ಮತ್ತು ತಮ್ಮವರ ಏಳಿಗೆಗಾಗಿ ಶ್ರಮಿಸುವ ನಿಸ್ವಾರ್ಥ ಜನ ಸೇವಕ, ಯುವ ಪೀಳಿಗೆಯ ನೆಚ್ಚಿನ ರಾಜಣ್ಣ ಎಂದೇ ಕರೆಯಲ್ಪಡುವ ಶ್ರೀಯುತರು ಬಿಲ್ಲವ ಸಮಾಜದ ಪ್ರತಿಷ್ಠಿತ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾಗಿ 3ನೇ ಬಾರಿ ಅವಿರೋಧವಾಗಿ ಪುನರಾಯ್ಕೆ ಗೊಂಡಿರುತ್ತಾರೆ ಹಾಗೂ ಉಪಾಧ್ಯಕ್ಷರಾಗಿ ಕ್ಷೇತ್ರದ ಆಡಳಿತ ಸಮಿತಿಯ ಸದಸ್ಯರಾದ ಶ್ರೀ ಸೂರ್ಯಕಾಂತ್ ಸುವರ್ಣರವರಿಗೆ ಮತ್ತು ಶ್ರೀ ಹರೀಶ್ ಡಿ .ಸಾಲ್ಯಾನ್ ಬಜಗೋಳಿಯವರನ್ನು ಬಿಲ್ಲವ ಮಹಾಮಂಡಳದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

Leave a Reply

Your email address will not be published. Required fields are marked *