
ಕೋಟ ಮೂರ್ತೆದಾರರ ಸಹಕಾರಿ ಸಂಘ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ; ಅಧ್ಯಕ್ಷ ಕೆ. ಕೊರಗ ಪೂಜಾರಿ ಪುನರಾಯ್ಕೆ
ಕೋಟ: ಮೂರ್ತೆದಾರರ ಸೇವಾ ಸಹಕಾರಿ ಸಂಘದ 2023-24 ರಿಂದ 2027-28ನೇ ಸಾಲಿನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಂಘದ ನಿರ್ದೇಶಕ ಸ್ಥಾನಕ್ಕೆ ರಾಮ ಪೂಜಾರಿ, ಪಿ. ಕೃಷ್ಣ ಪೂಜಾರಿ, ಜಯರಾಮ ಪೂಜಾರಿ, ಕೆ. ಕೊರಗ ಪೂಜಾರಿ, ಮಂಜುನಾಥ ಪೂಜಾರಿ, ರಾಜು ಪೂಜಾರಿ, ಜಿ. ಸಂಜೀವ ಪೂಜಾರಿ, ಕೃಷ್ಣ ಪೂಜಾರಿ ಪಾರಂಪಳ್ಳಿ, ಭಾರತಿ ಎಸ್. ಪೂಜಾರಿ, ಪ್ರಭಾವತಿ ಡಿ. ಬಿಲ್ಲವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಕೆ. ಕೊರಗ ಪೂಜಾರಿ, ಉಪಾಧ್ಯಕ್ಷರಾಗಿ ಜಯರಾಮ ಪೂಜಾರಿ ಪುನರಾಯ್ಕೆಗೊಂಡಿದ್ದು; ಸಂಘದ ಚುನಾವಣಾ ನಿರ್ವಾಚನಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಜ್ಯೋತಿ ಡಿ. ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.














Leave a Reply