
ಕೋಟ: ಗುಣಮಟ್ಟದ ಹಾಲನ್ನೆ ಸಂಘಕ್ಕೆ ನೀಡಬೇಕು ಆ ಮೂಲಕ. ತಾವು ಅಭಿವೃದ್ಧಿಗೊಳ್ಳುವುದರ ಜೊತೆಗೆ ನಿಮ್ಮ ಸಂಘದ ಅಭಿವೃದ್ಧಿಗೊಳಿಸಿ ಎಂದು ದ.ಕ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ ವಿಸ್ತೀರ್ಣಾಧಿಕಾರಿ ಸರಸ್ವತಿ ಹೇಳಿದರು.
ಹಾಲು ಉತ್ಪಾದಕರ ಸಹಕಾರ ಸಂಘ ಕೋಟ ಇದರ ಸಾಮಾನ್ಯ ಸಭೆಯಲ್ಲಿ ಮಾತನಾಡಿ ಹೈನುಗಾರಿಕೆ ಬಗ್ಗೆ ಹಿಂಜರಿಕೆ ಸಲ್ಲ ಬದಲಾಗಿ ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ ಸಹಕಾರಿಯಾಗಿದೆ .ಹೈನುಗಾರಿಕೆಯಲ್ಲಿ ಶಿಸ್ತುಬದ್ಧತೆ ಅಗತ್ಯವಾಗಿದೆ.ಹೈನುಗಳಿಗೆ ಬರುವ ರೋಗದ ಬಗ್ಗೆ ನಿರ್ಲಕ್ಷ್ಯ ತೋರಬೇಡಿ ಆಗಾಗ ಲಸಿಕೆ ಹಾಕುವುದನ್ನು ಮರೆಯದಿರಿ,ಯುವ ಸಮುದಾಯ ಹೈನುಗಾರಿಕೆ ಬಗ್ಗೆ ಆಸಕ್ತಿ ತೋರಿ ತೊಡಗಿಕೊಳ್ಳಲು ಕರೆಇತ್ತರು.
ಈ ಸಂದರ್ಭದಲ್ಲಿ ಸಂಘಕ್ಜೆ ಅತಿ ಹೆಚ್ಚು ಹಾಲು ನೀಡಿದ ಸದಸ್ಯರಾದ ಪ್ರಕಾಶ್ ಶೆಟ್ಟಿ, ಶಾರದ ಆಚಾರ್,ಶಾರದ ಶೆಟ್ಟಿ ಕೊಯ್ಕೂರು,ಸುಶೀಲ ಶೆಟ್ಟಿ, ರಾಜೀವ ದೇವಾಡಿಗ ಬಹುಮಾನ ನೀಡಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ವಹಿಸಿ ಕಾರ್ಯಕ್ರಮ ನಿರ್ವಹಿಸಿದರು.
ಸಂಘದ ಉಪಾಧ್ಯಕ್ಷ ನರಸಿಂಹ ಪೂಜಾರಿ,ಶ್ರೀಕಾಂತ್ ಮಯ್ಯ,ರಮಾನಂದ ಉರಾಳ,ರಾಜೀವ ದೇವಾಡಿಗ, ಪ್ರಕಾಶ್ ಶೆಟ್ಟಿ ದೇವಸ, ಎಂ ಜೋಸೆಫ್ ಫುಡ್ತಾಡೋ, ಸುಶೀಲ, ರಾಜು ಪೂಜಾರಿ ಉಪಸ್ಥಿತರಿದ್ದರು. ನಿರ್ದೇಶಕ ಕೃಷ್ಣ ದೇವಾಡಿಗ ವರದಿ ವಾಚಿಸಿದರು. ಕಾರ್ಯಕ್ರಮವನ್ನು ಸಂಘ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್ ಸ್ವಾಗತಿಸಿ ನಿರೂಪಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘ ಕೋಟ ಇದರ ಸಾಮಾನ್ಯ ಸಭೆಯಲ್ಲಿ ಸಂಘಕ್ಜೆ ಅತಿ ಹೆಚ್ಚು ಹಾಲು ನೀಡಿದ ಸದಸ್ಯರಾದ ಪ್ರಕಾಶ್ ಶೆಟ್ಟಿ, ಶಾರದ ಆಚಾರ್,ಶಾರದ ಶೆಟ್ಟಿ ಕೊಯ್ಕೂರು,ಸುಶೀಲ ಶೆಟ್ಟಿ, ರಾಜೀವ ದೇವಾಡಿಗ ಬಹುಮಾನ ನೀಡಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ನರಸಿಂಹ ಪೂಜಾರಿ,ಶ್ರೀಕಾಂತ್ ಮಯ್ಯ,ರಮಾನಂದ ಉರಾಳ, ರಾಜೀವ ದೇವಾಡಿಗ,bಪ್ರಕಾಶ್ ಶೆಟ್ಟಿ ದೇವಸ, ಎಂ ಜೋಸೆಫ್ ಫುಡ್ತಾಡೋ ಸಂಘ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ್ ಇದ್ದರು.














Leave a Reply