Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಣೂರು- ಮೀನುಗಾರಿಕೆಯ ಕುರಿತು ಅಧ್ಯಯನ ಅತ್ಯಗತ್ಯ,ಸ್ವ ಉದ್ಯೋಗಕ್ಕೆ ಮುನ್ನುಡಿ ಬರೆಯುತ್ತಿರುವುದು ಆಶಾದಾಯಕ — ಆನಂದ್ ಸಿ ಕುಂದರ್

ಕೋಟ; ಕರ್ನಾಟಕ ಪಶುವೈದ್ಯಕೀಯ ,ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಬೀದರ, ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು ರಾಷ್ಟ್ರೀಯ ಸೇವಾ ಯೋಜನೆ , ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಲಿಮಿಟೆಡ್ ಇವರುಗಳ ಆಶ್ರಯದಲ್ಲಿ ಗ್ರಾಮೀಣ ಮೀನುಗಾರಿಕೆ ಚಟುವಟಿಕೆ ಅನುಭವ ರಾ.ಸೇ.ಯೋ.ವಾರ್ಷಿಕ ವಿಶೇಷ ವಾರ್ಷಿಕ ಶಿಬಿರ ಕಾರ್ಯಕ್ರಮ ಮಂಗಳವಾರ ಕೋಟ ಪಡುಕರೆ ಲಕ್ಷ್ಮೀಸೋಮಬಂಗೇರ ಸ.ಪ್ರ ಕಾಲೇಜಿನ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮವನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಕರಾವಳಿ ಭಾಗದಲ್ಲಿ ಮೀನುಗಾರಿಕೆಯನ್ನು ತಮ್ಮ ಜೀವಾಳ ಕಸಬುವಾಗಿಸಿಕೊಂಡಿದ್ದಾರೆ. ಮೀನುಗಾರಿಕೆ ಬಗ್ಗೆ ಅಧ್ಯಯನ ಅತ್ಯಗತ್ಯ ಈ ಕ್ಷೇತ್ರದಲ್ಲಿ ಹೊಸ ತಲೆಮಾರು ಕಾರ್ಯೋನ್ಮುಖವಾಗಬೇಕು, ಕೆನಾರ ಮೀನುಗಾರಿಕೆ ಉತ್ಪಾದಕ ಕಂಪನಿ ಸ್ವ ಉದ್ಯೋಗ ಸೃಷ್ಠಿಯಲ್ಲಿ ತಮ್ಮದೆ ಆದ ಮಹತ್ತರ ಪಾತ್ರ ವಹಿಸುತ್ತಿದೆ. ಉದ್ಯೋಗ ಸೃಷ್ಠಿಸುವುದರ ಜತೆಗೆ ವ್ಯವಸ್ಥೆಯಲ್ಲಿ ಪೂರಕವಾದ ವಾತಾವರಣ ಸೃಷ್ಠಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀನುಗಾರಿಕಾ ಮಹಾವಿದ್ಯಾಲಯ, ಮಂಗಳೂರು ಇದರ ಡೀನ್ ಡಾ. ಹೆಚ್. ಎನ್. ಆಂಜನೇಯಪ್ಪ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಲ. ಸೋ, ಬಂ. ಸ. ಪ್ರ. ದ.ಕಾಲೇಜು, ಕೋಟ-ಪಡುಕರೆ ಪ್ರಾಂಶುಪಾಲೆ ಡಾ. ಸುನೀತಾ ವಿ, ಉಡುಪಿ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್ ಆರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕುಮಾರ್ ಶೆಟ್ಟಿ, ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಲಿಮಿಟೆಡ್ ಅಧ್ಯಕ್ಷ ಲೋಹಿತ್ ಖಾರ್ವಿ, ರಾ. ಸೇ. ಯೋ. ಸಂಯೋಜಕ ಡಾ. ಶ್ರೀಕಾಂತ್ ಕುಲಕರ್ಣಿ, ರಾ. ಸೇ. ಯೋ.ಯ ಕಾರ್ಯಕ್ರಮಧಿಕಾರಿ ಹಾಗೂ ಶಿಬಿರಾಧಿಕಾರಿ ಡಾ. ಮೃದುಲಾ ರಾಜೇಶ್, ಸಹ ಶಿಬಿರಾಧಿಕಾರಿ ಮನೋಜ್ ಕುಮಾರ್ , ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಮೇಶ್ ಹೆಚ್ ಕುಂದರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಪ್ರಿಯಾಂಕಾ ನಿರೂಪಿಸಿದರು. ಶೀತಲ್ ಸ್ವಾಗತಿಸಿದರು. ಭೂಮಿಕಾ ವಂದಿಸಿದರು.ಹರೀಶ್ ಸಹಕರಿಸಿದರು.

ಮಂಗಳವಾರ ಕೋಟ ಪಡುಕರೆ ಲಕ್ಷ್ಮೀಸೋಮಬಂಗೇರ ಸ.ಪ್ರ ಕಾಲೇಜಿನ ಸಭಾಂಗಣದಲ್ಲಿ ನಡೆದಗ್ರಾಮೀಣ ಮೀನುಗಾರಿಕೆ ಚಟುವಟಿಕೆ ಅನುಭವ ರಾ.ಸೇ.ಯೋ. ವಾರ್ಷಿಕ ವಿಶೇಷ ವಾರ್ಷಿಕ ಶಿಬಿರ ಕಾರ್ಯಕ್ರಮವನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿದರು. ಲ. ಸೋ, ಬಂ. ಸ. ಪ್ರ. ದ.ಕಾಲೇಜು, ಕೋಟ-ಪಡುಕರೆ ಪ್ರಾಂಶುಪಾಲೆ ಡಾ. ಸುನೀತಾ ವಿ,ಉಡುಪಿ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್ ಆರ್,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕುಮಾರ್ ಶೆಟ್ಟಿ ಇದ್ದರು.

Leave a Reply

Your email address will not be published. Required fields are marked *