
ಕೋಟ: ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಸಾಸ್ತಾನ ವತಿಯಿಂದ ಸ್ವಸಹಾಯ ಗುಂಪುಗಳ ರಚನೆ ಮತ್ತು ಅದರ ಮಹತ್ವ ಕಾರ್ಯಕ್ರಮ ಪಾಂಡೇಶ್ವರ ಶಾಲೆಯಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ ಬಿಲ್ಲವ ಪರಿಷತ್ ಕಟಪಾಡಿ ಇದರ ಸಂಚಾಲಕ ನವೀನ್ ಅಮೀನ್ ಕಟಪಾಡಿ ಸ್ವ ಸಹಾಯ ಗುಂಪುಗಳ ರಚನೆ ಮತ್ತು ಅದರ ಮಹತ್ವದ ಕುರಿತು ಸಮಗ್ರ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಬಿಲ್ಲವ ಯುವ ವೇದಿಕೆ ಅಧ್ಯಕ್ಷ ರವಿಕಿರಣ್ ಪೂಜಾರಿ ವಹಿಸಿದ್ದರು. ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ ಇದರ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ,ಸಂಯೋಜಕ ಸುರೇಶ್ ಪೂಜಾರಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸೀಮಾ ವಿಜಯ್ ಪೂಜಾರಿ ನಿರ್ವಹಿಸಿದರು. ಒಟ್ಟು 10 ಸ್ವ ಸಹಾಯ ಗುಂಪುಗಳ ರಚನೆಗೆ ಗುರಿ ಇರಿಸಲಾಗಿದ್ದು 8 ಗುಂಪಿನ ಪ್ರಮುಖರಿಗೆ ನಡಾವಳಿ ಪುಸ್ತಕ ಹಾಗೂ ನಿರ್ಣಯ ಪ್ರತಿಯನ್ನು ವಿತರಿಸಲಾಯಿತು.
ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ಸಾಸ್ತಾನ ವತಿಯಿಂದ ಸ್ವಸಹಾಯ ಗುಂಪುಗಳ ರಚನೆ ಮತ್ತು ಅದರ ಮಹತ್ವ ಕಾರ್ಯಕ್ರಮದಲ್ಲಿ ಬಿಲ್ಲವ ಪರಿಷತ್ ಕಟಪಾಡಿ ಇದರ ಸಂಚಾಲಕ ನವೀನ್ ಅಮೀನ್ ಕಟಪಾಡಿ ಮೂಲಕ ಪ್ರತಿಯನ್ನು ಹಸ್ತಾಂತರಿಸಲಾಯಿತು. ಬಿಲ್ಲವ ಯುವ ವೇದಿಕೆ ಅಧ್ಯಕ್ಷ ರವಿಕಿರಣ್ ಪೂಜಾರಿ,ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ ಇದರ ಪ್ರಧಾನ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಇದ್ದರು.














Leave a Reply