
ಮಾನವೀಯತೆ ಮೆರೆದ ಗಿಳಿಯಾರು ಸುಭಾಷ್ ಶೆಟ್ಟಿ ಸಿಕ್ಕ ಹಣ ವಾರಿಸುದಾರರಿಗೆ ಹಸ್ತಾಂತರ
ಕೋಟ: ಇತ್ತೀಚಿಗೆ ಸಾಲಿಗ್ರಾಮ ಶ್ರೀ ಆಂಜನೇಯ ದೇವಸ್ಥಾನದ ಬಳಿ ಸಿಕ್ಕ ಹಣವನ್ನು ಉದ್ಯಮಿ ಸುಭಾಷ್ ಶೆಟ್ಟಿ ಗಿಳಿಯಾರು ವಾರಿಸುದಾರರಿಗೆ ಸೋಮವಾರ ಹಸ್ತಾಂತರಿಸಿದರು.
ಸಾಲಿಗ್ರಾಮದ ನಿವಾಸಿ ನಾಗರಾಜ ಗಾಣಿಗ ಎಂಬುವವರು ಸಾಲಿಗ್ರಾಮ ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಶನದಲ್ಲಿ ಹಣ ಕಳೆದುಕೊಂಡಿದ್ದು ಅದೇ ಸಂದರ್ಭದಲ್ಲಿ ದೇವಳದ ಸಂದರ್ಶನದಲ್ಲಿದ್ದ ಸಾಸ್ತಾನ ಸುಷ್ಮಾ ವೈನ್ಸ್ ಮಾಲಿಕ ಸುಭಾಷ್ ಶೆಟ್ಟಿ ಗಿಳಿಯಾರು ಸಾಮಾಜಿಕ ಕಾರ್ಯಕರ್ತ ಜೀವನ್ ಮಿತ್ರ ನಾಗರಾಜ್ ಪುತ್ರನ್ ಮೂಲಕ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಮಾಡಿದ್ದು ಇದನ್ನು ನೋಡಿ ನಾಗರಾಜ್ ಗಾಣಿಗ ಸುಭಾಷ್ ಶೆಟ್ಟಿ ಸಂಪರ್ಕಿಸಿ ಹಣ ವಾಪಸ್ ಪಡೆದು ಕೃತಜ್ಞತೆ ಸಲ್ಲಿಸಿದರು.














Leave a Reply